ಮಂಜೇಶ್ವರ: ಪಾದಚಾರಿಗೆ ವ್ಯಾನೊಂದು ಢಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.
ಏನಿದು ಪ್ರರಣ: ಪಾದಚಾರಿ ಅಬೂಬಕ್ಕರ್ ಮಾ.11ರ ಸಂಜೆ ಮಣ್ಣಂಗುಝಿಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಸೋಂಕಾಲು ಕಡೆಯಿಂದ ಬರುತ್ತಿದ್ದ ವ್ಯಾನ್ ಢಿಕ್ಕಿ ಹೊಡೆದಿದ್ದು, ಈ ಬಗ್ಗೆ ಚಾಲಕನ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

