ಉಡುಪಿ:- ಉಡುಪಿ ಉ.ಕ ಮತ್ತು ದ.ಕ ಜಿಲ್ಲೆಗಳನ್ನೊಳಗೊಂಡ ಜೇಸಿಐ ವಲಯ 15 ಇದರ ನೂತನ ಸದಸ್ಯರಿಗೆ ಆಯೋಜಿಸಲಾದ ತರಬೇತಿ ಕಾರ್ಯಾಗಾರ ಸ್ವಾಗತ್ ಜೇಸಿಐ ಉಡುಪಿ ಸಿಟಿ ಇದರ ಆಶ್ರಯದಲ್ಲಿ ನಿತ್ಯಾನಂದ ಆರ್ಕೇಡ್ ಮಾ.10 ಮತ್ತು 11 ರಂದುಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಜೇಸಿ ವಲಯಾದ್ಯಕ್ಷರಾಕೇಶ್‍ಕುಂಜೂರು ಉದ್ಘಾಟಿಸಿ ಮಾತನಾಡಿ ಜೇಸಿ ಸಂಸ್ಥೆಯು ವ್ಯವಕ್ತಿತ್ವ ವಿಕಸನ ತರಬೇತಿ ಸಂಸ್ಥೆಯಾಗಿದ್ದು ನಾತನ ಸದಸ್ಯರುಇಲ್ಲಿ ಸಿಗುವ ಅವಕಾಶ ವನ್ನು ಪಡೆದುಜೀವನದಲ್ಲಿಅತ್ಯಂತ ಯಶಸ್ವಿಯಾಗಿ ಮುನ್ನಡೆಯಬಹುದುಎಂದರು.
ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪೂರ್ವರಾಷ್ಟಿಯ ಕಾನೂನು ಸಲಹೆಗಾರ ಶ್ರೀಧರ ಪಿ.ಎಸ್,ಸಮಾಜ ಸೇವಕ ವಿಶ್ವನಾಥ ಶೆಣ್ಯೆ ಭಾಗವಹಿಸಿದ್ದರು.ತರಬೇತುದಾರರಾಗಿ ರಾಷ್ಟಿಯತರಬೇತುದಾರರಾಜೇಂದ್ರ ಭಟ್,ಪ್ರಭಾಕರ ಶೆಟ್ಟಿ,ಪೂರ್ಣಿಮಾ ಸುರೇಶ್ ಭಾಗವಹಿಸಿದ್ದರು.ಅದ್ಯಕ್ಷತೆಯನ್ನು ಕಾರ್ಯಕ್ರಮ ನಿರ್ದೇಶಕ ಧೀರೇಂದ್ರಜೈನ್ ವಹಿಸಿದ್ದರು.
ವೇದಿಕೆಯಲ್ಲಿ ನಿಕಟಪೂರ್ವ ವಲಯಾದ್ಯಕ್ಷ ಸಂತೋಷ್ ಜಿ,ವಲಯಉಪಾದ್ಯಕ್ಷರಾಘವೇಂದ್ರ ಪ್ರಭುಕರ್ವಾಲು.ಪೂರ್ವ ವಲಯಾದ್ಯಕ್ಷ ಸಂದೀಪ್‍ಕುಮಾರ್ ಮುಂತಾದವರಿದ್ದರು.ಅದ್ಯಕ್ಷರಫೀಕ್‍ಖಾನ್ ಸ್ವಾಗತಿಸಿದರು.ಕರುಣಾಕರ ಬಂಗೇರ ವಂದಿಸಿದರು.ಶಕೀರ್ ಹಾವಂಜೆ ಪರಿಚಯಿಸಿದರು.
