ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ಬ್ಯಾಂಕ್ ಮಂಗಳೂರು ಇದರ ವತಿಯಿಂದ ಪ್ರೊಜೆಕ್ಟರ್ ಹಾಗೂ ಲ್ಯಾಪ್‍ಟಾಪ್ ಕೊಡುಗೆಯ ಹಸ್ತಾಂತರವನ್ನು  ಮಂಗಳವಾರ  ಮಾಡಲಾಯಿತು.   ರಮೇಶ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೊಜೆಕ್ಟರ್ ಹಾಗೂ ಲ್ಯಾಪ್‍ಟಾಪ್‍ನ್ನು ಶಾಲಾ ಸಂಚಾಲಕರಿಗೆ ಹಸ್ತಾಂತರಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು   ವಂ. ಫಾ. ಎರಿಕ್ ಕ್ರಾಸ್ತಾ ವಹಿಸಿದ್ದರು.SHV_0359

ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಸಹಾಯಕ ಉಪ ನಿರ್ದೇಶಕರಾದ) ರಮೇಶ್ ಭಟ್, ಭಾರತೀ ಸೇವಾ ಟ್ರಸ್ಟ್ ವಿಟ್ಲ, ಇದರ ಅಧ್ಯಕ್ಷರಾದ  ಸುಬ್ರಾಯ ಪೈ,  ಸತೀಶ್ ಕುಮಾರ್ ಆಳ್ವ, ಅಧ್ಯಕ್ಷರು ಲಯನ್ಸ್ ಸೇವಾ ಟ್ರಸ್ಟ್ ವಿಟ್ಲ,  ಶಂಕರ್‍ನಾರಾಯಣ ವ್ಯವಸ್ಥಾಪಕರು ಕರ್ನಾಟಕ ಬ್ಯಾಂಕ್ ಮಾಣಿಲ ಶಾಖೆ ಹಾಗೂ  ಸುದರ್ಶನ್ ಪಡಿಯಾರ್ ಶಾಲಾ ಸಮಿತಿಯ ಗೌರವ ಸಲಹೆಗಾರರು, ಆಡಳಿತ ಮಂಡಳಿ ಹಾಗೂ ಸಲಹಾ ಸಮಿತಿಯ ಸದಸ್ಯರು ಮತ್ತು ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು.   ಶಾಲಾ ಸಂಚಾಲಕರು ಅಥಿತಿಗಳನ್ನು ಸನ್ಮಾನಿಸಿ ಗೌರವಿಸಿದರು.

 ಕಾರ್ಯಕ್ರಮವನ್ನು  ಸಚಿನ್ ಎಮ್. ನಿರೂಪಿಸಿದರು.   ಜಯರಾಮ ಶಾಸ್ತ್ರಿ ವಂದಿಸಿದರು.

By suddi9

Leave a Reply

Your email address will not be published. Required fields are marked *