ವಿಟ್ಲ: ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು(ದ ಕ ಮತ್ತು ಉಡುಪಿ ಜಿಲ್ಲೆ) ಇದರ ವಿಟ್ಲ ವಲಯದ 2017-18ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ ಲಕ್ಷ್ಮಣ ಪೂಜಾರಿ ಇವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಪ್ರಕಾಶ್ ಅಣ್ಣಡ್ಕ, ಗೌರವಾಧ್ಯಕ್ಷರಾಗಿ ಹರೀಶ್ ಆಚಾರ್ಯ ಚಂದಳಿಕೆ, ಉಪಾಧ್ಯಕ್ಷರುಗಳಾಗಿ ಚಂದ್ರಹಾಸ ಮತ್ತು ನಿತ್ಯಾನಂದ,ಜತೆಕಾರ್ಯದರ್ಶಿ ರಾಜಶೇಖರ, ಕೋಶಾಧಿಕಾರಿ ವಿರಾಜ್ ಕುಲಾಲ್, ಸಂಚಾಲಕ ಕೇಶವ ಪಿ, ಸಂಘಟನಾ ಕಾರ್ಯದಶಿ ಪ್ರಕಾಶ್ ಬೊಬ್ಬೆಕ್ಕೇರಿ ಮತ್ತು ಪುರಂದರ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಸುಂದರ ಆಚಾರ್ಯ, ಶೇಖರ ಭಟ್, ಬಿಕೆ ಬಾಬು, ಚಿದಾನಂದ ವಿ, ಉಮ್ಮರ್ ಕೆ ಪಿ, ಲಕಪ್ಪ ಗೌಡ, ಈಶ್ವರ ಪಿ ಮತ್ತು ದನಂಜಯ ಎನ್ ಇವರನ್ನು ಆಯ್ಕೆ ಮಾಡಲಾಯಿತು

