ಮಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಸಿದ್ದರಾಮಯ್ಯರವರನ್ನು ಟೀಕಿಸುವ ಭರದಲ್ಲಿ ಅಸಭ್ಯ ಪದಬಳಸಿದ ಘಟನೆ ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿಯ ಜನ ಸುರಕ್ಷಾ ಯಾತ್ರೆಯ ಸಮಾರಂಭ ಕಾರ್ಯಕ್ರಮದಲ್ಲಿ ನಡೆದಿದೆ.
ಈ ವೇಳೆ ಸಚಿವ ಅನಂತಕುಮಾರ್ ಹೆಗ್ಡೆ ಮಾತನಾಡಿ, ಯಡಿಯೂರಪ್ಪರನ್ನು ಏಕವಚನದಲ್ಲಿ ಮಾತನಾಡುವವರಿಗೆ ನನ್ನ ಮಾತೆ ಸರಿ. ಸಿದ್ದರಾಮಯ್ಯ ಗೊತ್ತಿಲ್ಲದಂತೆ ಸಾವಿನ ಭಾಗ್ಯ ಕೊಟ್ಟಿದ್ದಾರೆ. ಇದು ಪಾತಕ ಸರಕಾರ ಪಾಪಿ ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದರು.
ಮೋದಿ, ಇದು ಕರ್ನಾಟಕದ ದೌರ್ಭಾಗ್ಯ. ಕಾಂಗ್ರೆಸ್ ಕಳೆಯನ್ನು ಬಿಜೆಪಿ ತೆಗೆಯುತ್ತದೆ.ಮಠಗಳನ್ನು ವಶಪಡಿಸಲು ಸಿದ್ದರಾಮಯ್ಯ ರಿಗೆ ದಮ್ ಇದೆಯ? ದಮ್ ಇದ್ದರೆ ನೋಟಿಸ್ ನೀಡಿ. ಅಲ್ಪಸಂಖ್ಯಾತರ ಮತಕ್ಕಾಗಿ ಜೊಲ್ಲು ಸುರಿಸುತ್ತೀರಿ. ಹಾಗಾದರೆ ಶೇ.80 ಇರುವ ಹಿಂದುಗಳು ಬೇವರ್ಸಿಗಳಾ ಎನ್ನುವ ಮೂಲಕ ಮತ್ತೊಮ್ಮೆ ಅಸಭ್ಯ ಪದಕ್ಕೆ ಗುರಿಯಾಗಿದ್ದಾರೆ.

