ಬೆಳ್ತಂಗಡಿ: ಇಲ್ಲಿನ ಶಾಸಕ ಆರ್ ಟಿ ಐ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿದ್ದು,ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ತಾಲೂಕಿನ ಇಂದುಬೆಟ್ಟು ನಿವಾಸಿ ವೆಂಕಪ್ಪ ಕೋಟ್ಯಾನ್ ಹಲ್ಲೆಗೊಳಗಾದ ಆರ್ ಟಿ ಐ ಕಾರ್ಯಕರ್ತ ಎಂದು ಗುರುತಿಸಲಾಗಿದೆ.
ಶಾಸಕ ವಸಂತ ಬಂಗೇರ ಕಚೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆಗೆ ಕೋಟ್ಯಾನ್ ಆಗಮಿಸಿದ್ದ ಎನ್ನಲಾಗಿದ್ದು, ಈ ವೇಳೆ ಶಾಸಕ ಹಾಗೂ ಕೋಟ್ಯಾನ್ ಮಧ್ಯೆ ವಾಗ್ದಾದ ನಡೆದಿದೆ.
ಶಾಸಕ ಬಂಗೇರ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಶಾಸಕರ ಬೆಂಬಲಿಗರು ಕೂಡ ಕೋಟ್ಯಾನ್ ಮೇಲೆ ಹಲ್ಲೆ ಮಾಡಿ ಕಾಲಿನಿಂದ ತುಳಿದು ಕ್ರೌರ್ಯ ಮೆರೆದಿದ್ದಾರೆ ಎಲ್ಲ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಸಕರ ವರ್ತನೆಗೆ ಸಾರ್ವನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

