ಮಂಗಳೂರು: ದ.ಕನ್ನಡ ಜಿಲ್ಲೆಯಲ್ಲಿ ಭೂಗತ ಚಟುವಟಿಕೆಗಳ ಕುರಿತಂತೆ ಬೆಂಗಳೂರು ಪೊಲೀಸರು ಕಳೆದ ಎರಡು ದಿನಗಳಿಂದ ಜಿಲ್ಲೆಗೆ ಆಗಮಿಸಿ ಮಾಹಿತಿ ಸಂಗ್ರಹಿಸಿರುವುದಾಗಿ ಮೂಲಗಳು ತಿಳಿಸಿವೆ.

don

ಜಿಲ್ಲೆಯಲ್ಲಿ ಭೂಗತ ಪಾತಕಿಗಳು ಉದ್ಯಮಿಗಳಿಗೆ, ಬಿಲ್ಡರ್‌ಗಳಿಗೆ ಬೆದರಿಕೆಯೊಡ್ಡಿ ಹಪ್ತಾ ವಸೂಲಿ ಮಾಡುತ್ತಿದ್ದಾರೆ ಎಂಬ ಬಗ್ಗೆ ರಾಜ್ಯಮಟ್ಟದಲ್ಲಿ ಚರ್ಚೆಯಾಗಿದ್ದು ವಿಧಾನಸಭೆಯಲ್ಲೂ ಪ್ರಸ್ತಾವನೆಯಾಗಿತ್ತು. ಭೂಗತ ಪಾತಕಿಗಳನ್ನು ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಜಿಲ್ಲೆಯ ಉದ್ಯಮ ವಲಯದಿಂದ ರಾಜ್ಯ ಗೃಹಸಚಿವರಿಗೂ ಮನವಿ ಸಲ್ಲಿಸಲಾಗಿತ್ತು

ಬೆಂಗಳೂರಿನಿಂದ ಆಗಮಿಸಿರುವ ಪೊಲೀಸರ ತಂಡ ಮಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ತೆರಳಿ ಭೂಗತ ಪಾತಕಿಗಳು ಹಾಗೂ ಅವರ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಜಿಲ್ಲೆಯ ಪೊಲೀಸರಿಂದಲೂ ವಿವರಗಳನ್ನು ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಭೂಗತ ಪಾತಕಿಗಳನ್ನು ಮಟ್ಟಹಾಕಲು ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಿದೆ ಎನ್ನಲಾಗಿದೆ. ಇದರಂತೆ ಬೆಂಗಳೂರಿನ ಪೊಲೀಸರು ದ.ಕನ್ನಡ ಜಿಲ್ಲೆಗೆ ಆಗಮಿಸಿ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.

By Suddi9

Leave a Reply

Your email address will not be published. Required fields are marked *