ಮಂಗಳೂರು: ಕಂಚಿಶ್ರೀ ದೇಹಾಂತ್ಯಕ್ಕೆ ಕೆಲವು ಸ್ವಾಮೀಜಿಗಳು, ಗಣ್ಯರು ಶ್ರದ್ಧಾಂಜಲಿ ಅರ್ಪಿಸಿ ಕಣ್ಣೀರು ಇಡುತ್ತಿದ್ದು, ಇವರ ಢೋಂಗಿತನವನ್ನು ತೋರಿಸಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಕಾರ್ಯಕ್ರಮವೊಂದಕ್ಕೆ ಭಾಗವಹಿಸುವ ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿರು.
ಕಂಚಿಶ್ರೀ ಶ್ರೀಗಳು ಕಷ್ಟದಲ್ಲಿದ್ದಾಗ ಸ್ಪಂದನೆ ನೀಡದ ಇವರೆಲ್ಲರೂ ಒಂದೇ ಒಂದು ಶಬ್ದವನ್ನೂ ಅವರ ಬಗ್ಗೆ ಮಾತನಾಡಿಲ್ಲ. ಅಲ್ಲದೆ, ಅವರ ಬಂಧನದ ಸಂದರ್ಭದಲ್ಲೂ ಇವರು ಬೀದಿಗಿಳಿದು ಪ್ರತಿಭಟನೆ ನಡೆಸಿಲ್ಲ ಎಂದವರು, ಆದರೆ ಇದೀಗ ಇವರು ಕಣ್ಣೀರು ಹಾಕೋದು ಇವರ ಢೋಂಗಿತನವನ್ನು ತೋರಿಸಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಮುತಾಲಿಕ್ ಕೆಲವು ಸ್ವಾಮೀಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

