ಶ್ರವಣಬೆಳಗೊಳ ಶತಮಾನದ ಎರಡನೇ ಮಹಾಮಜ್ಜನಕ್ಕ್ಕೆ ಅಣಿಯಾಗುತ್ತಿದೆ. ಭಗವಾನ್ ಬಾಹುಬಲಿಗೆ ಮಹಾಮಸ್ತಾಭಿಷೇಕದ ಪ್ರಕ್ರಿಯೇಗಳು ಆರಂಭಗೊಂಡಿದು, ಇಡೀ ಪರಿಸರ ಸಂಭ್ರಮದಿಂದ ಕಂಗೊಳಿಸುತ್ತಿದೆ.

ಹನ್ನೊಂದನೇ ಶತಮಾನದಲ್ಲಿ ಚಾವುಂಡರಾಯ ಈ 58 ಅಡಿಯ ಏಕಶಿಲಾ ವಿಗ್ರಹವನ್ನ ಕೆತ್ತಿಸಿದ ಮತ್ತು ಮೊದಲನೇ ಮಸ್ತಕಾಭಿಷೇಕವನ್ನ ಮಾಡಿಸಿದ ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಚಾವುಂಡರಾಯನಿಂದಲೇ ಈ ಬೃಹತ್ ಮೂರ್ತಿಗೆ ಗೊಮ್ಮಟೇಶ್ವರ ಎಂಬ ಹೆಸರು ಬಂತೆಂದು ಹಲವು ಕಡೆ ಉಲ್ಲೇಖಿಸಿಲಾಗಿದೆ.

ವಿರಕ್ತ ಮೂರ್ತಿಗೆ ದೇವತೆಗಳೇ ಮೊದಲ ಅಭಿಷೇಕ ಮಾಡಿದ್ರು ಎಂತಲು ಹೇಳಲಾಗುತ್ತದೆ. ಪ್ರತಿ 12 ವರ್ಷಕ್ಕೊಮ್ಮೆ ಜರಗುವ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೋಳ್ಳಲು ಜಗತ್ತಿನಾದ್ಯಂತದಿಂದ ಜನರು ಬರುತ್ತಾರೆ. ಈಗ ನಡೆಯುವ ಮಸ್ತÀಕಾಭಿಷೇಕದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಚಾತುರ್ಮಾಸ ಆಚರಿಸಿ ಇಲ್ಲಿಗೆ ಆಗಮಿಸಿದ ಸುಮಾರು 300 ಕ್ಕೂ ಹೆಚ್ಚು ಮುನಿಗಳು, ದಿಗಂಬರರು ಭಾಗವಿಸಲಿದ್ದಾರೆ.

ಇವರೆಲ್ಲರಿಗೂ ಸೂಕ್ತ ವ್ಯವಸ್ಧೆಯನ್ನು ಕಲ್ಪಿಸಲಾಗಿದೆ, ಅಲ್ಲದೆ ಪ್ರಂಪಚದ ನಾನ ದೇಶಗಳಿಂದ ಬರುವ ಸುಮಾರು 40 ಲಕ್ಷ ಜನರಿಗೆ ಮೂಲಭೂತ ವ್ಯವಸ್ಥೆಗಳನ್ನ ಕಲ್ಪಿಸಲಾಗಿದೆ. ದಿನಕ್ಕೆ ಸರಾಸರಿ ಸುಮಾರು 4 ಲಕ್ಷ ಜನ ಭಾಗವಹಿಸುವ ನೀರಿಕ್ಷೆ ಇದೆ.

Picture2
12 ವರ್ಷಕ್ಕೊಮ್ಮೆ ಮಸ್ತಕಾಬಿಷೇಕ ನಡೆಯಲು ಇನ್ನೂ ಹಲವು ಕಾರಣಗಳನ್ನ ನಂಬಲಾಗಿದೆ. ಅವುಗಳಲ್ಲಿ ಬಾಹುಬಲಿಯು 12 ವರ್ಷ ತಪಸ್ಸು ಮಾಡಿದ್ದರಿಂದ, ಬಾಹುಬಲಿ ಮೂರ್ತಿ ಮಾಡಲು ಕೆತ್ತನೆ ಕೆಲಸಕ್ಕೆ 12 ವರ್ಷ ತಗಲಿದ್ದರಿಂದ ಆಗಿರಬಹುದು, ಮಜ್ಜನಕ್ಕೆ ಉಪಯೋಗಿಸುವ ದ್ರವ್ಯಗಳು ಅಮೂಲ್ಯವಾದ್ದರಿಂದ ಅದು ಪೋಲಾಗದಿರಲಿ ಎಂಬ ದೃಷ್ಠಿಯಿಂದ, ಹೀಗೆ ಹಲವು ವಿಷಯಗಳು ಒಳಗೊಂಡಿದೆ.

ಅಭಿಷೇಕದಲ್ಲಿ 52 ವಿವಿಧ ಬಗೆಯ ಪುಷ್ಪಗಳು ಅಲ್ಲದೆ ಕೇಸರಿ, ಅರಶಿಣ, ಜಲ, ಕಬ್ಬಿನ ಹಾಲು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ. ಬಹಳ ವರ್ಷಗಳ ಹಿಂದೆ ತುಪ್ಪ ಮತ್ತು ಮೊಸರು ಬಳಸಲಾಗುತ್ತಿತ್ತು. ಈಗ ಮೂರ್ತಿಯ ಸಂರಕ್ಷಣೆ ಮತ್ತು ಸ್ವಚ್ಚತೆ ದೃಷ್ಟಿಯಿಂದ ಮೊಸರು ಮತ್ತು ತುಪ್ಪವನ್ನ ಬೃಹತ್ ಮೂರ್ತಿಗೆ ಅಭಿಷೇಕ ಮಾಡುತ್ತಿಲ್ಲ, ಬದಲಾಗಿ ಬೃಹತ್ ಮೂರ್ತಿಯ ಪಾದದ ಬುಡದಲ್ಲಿರುವ ಚಿಕ್ಕ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ.

Picture4
2018 ರ ಮಹಾಮಸ್ತಕಾಭಿಷೇಕ ಸಮಿತಿಯ ಸಹ ಅದ್ಯಕ್ಷರಾಗಿ ಮಾನ್ಯ ಶ್ರೀ ಅಭಯ ಚಂದ್ರ ಜೈನ್ ಆಯ್ಕೆಯಾಗಿದ್ದು, ಈ ಹಿಂದೆ 5 ಮಸ್ತಕಾಭಿಷೇಕಗಳಲ್ಲಿ ಸಕ್ರಿಯವಾಗಿ ಜವಾಬ್ದಾರಿಗಳನ್ನು ನಿಭಾಯಿಸಿದವರಾಗಿದ್ದು, ಅನುಭವಿಯಾದ ಇವರು ಸಮರ್ಥವಾಗಿ ಎಲ್ಲಾ ಪೂರ್ವಬಾವಿ ವ್ಯವಸ್ಥೆಗಳನ್ನ ನಿಭಾಯಿಸುವಲ್ಲಿ ಶಕ್ತರಾಗಿದ್ದಾರೆ. ಮಾನ್ಯ ಶ್ರೀಶ್ರೀಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯ ಮಾರ್ಗದರ್ಶನದಂತೆ, ಸಮಿತಿಯ ಇತರ ಸದಸ್ಯರ ಸಲಹೆಯನ್ನು ಪಡೆದು, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಹಾಸನ ಜಿಲ್ಲಾಧಿಕಾರಿ ಹಾಗೂ ಮಸ್ತಕಾಭಿಷೇಕ ವಿಶೇಷ ಅಧಿಕಾರಿಯು ಸೇರಿದಂತೆ ಅಧಿಕಾರಿಗಳ ದೊಡ್ಡ ತಂಡವೇ ಮಾನ್ಯ ಅಭಯ ಚಂದ್ರ ಜೈನ್ ರವರ ಜೊತೆ ಹಗಲಿರುಳು ಶ್ರಮಿಸುತ್ತಿದೆ. ಒಟ್ಟಿನಲ್ಲಿ 2018 ರ ಮಹಾ ಮಜ್ಜನಕ್ಕೆ ಶ್ರವಣಬೆಳಗೊಳ ಸಿದ್ದವಾಗಿದೆ. ತ್ಯಾಗ ಮೂರ್ತಿಯ ಮಹಾಮಸ್ತಕಾಭಿಷೇಕ ವೀಕ್ಷಿಸಲು ಶ್ರವಣಬೆಳಗೊಳದ ವಿಂದ್ಯಗಿರಿಯತ್ತ ಲಕ್ಷಲಕ್ಷ ಜನರು ಬರಲು ಆರಂಭಿಸಿದ್ದಾರೆ

ಲೇಖನ: ದಿವ್ಯಶ್ರೀ ಆಚಾರ್ಯ, ನಾರಂಪಾಡಿ

By suddi9

Leave a Reply

Your email address will not be published. Required fields are marked *