ಇದು ಅಷ್ಟಮಿ ಸ್ಪೆಷಲ್
ಕೈಕಂಬ: ತುಳುನಾಡಿನ ಜನರು ಕೋರಿದ ಕಟ್ಟ ಮಾಡುತ್ತಾರೆ, ಆದರೆ ತಾರಯಿದ ಕಟ್ಟವನ್ನೂ ಮಾಡುತ್ತಾರೆ. ಆದರೆ ಅದು ಅಷ್ಟಮಿಯದಂದು ಮಾತ್ರ. ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ ದ್ವಾದಶಿಯಂದು ತಂಗಿನ ಕಾಯಿಯ ಅಂಕ ನಡೆಸುತ್ತಾರೆ.

taraida katta (2)

taraida katta

taraida katta (1)
ಅಷ್ಟಮಿಗೆ ಒಂದು ತಿಂಗಳ ಮೊದಲೇ ಸೂಕ್ತ, ಗಟ್ಟಿಮುಟ್ಟಾದ ತೆಂಗಿನ ಕಾಯಿ ತೆಗೆದಿಡುತ್ತಾರೆ, ಆದರೆ ಇವುಗಳಲ್ಲಿ ಕೆಲವರು ಗೋಲ್ಮಾಲ್ ಮಾಡಿದ್ದ ಕಾರಣ ಇದೀಗ ಕೋಳಿ ಅಂಕ ನಡೆಯುವ ಸ್ಥಳದಲ್ಲೇ ತೆಂಗಿನಕಾಯಿ ಕೊಳ್ಳಬೇಕೆಂದು ನಿಯಮ ಮಾಡಿದ್ದಾರೆ.
ಉಳಿದಂತೆ ಕೋಳಿ ಕಟ್ಟದಂತೆಯೇ ನಡೆಯುವ ಈ ಅಂಕದಲ್ಲಿ ತೆಂಗಿನ ಕಾಯಿ ಒಡೆದರು ತೆಂಗಿನ ಕಾಯಿ ಕಳೆದುಕೊಳ್ಳುತ್ತಾರೆ.
ಹಳ್ಳಿಯಲ್ಲಿ ಈ ಕಾರ್ಯಕ್ರಮ ಭರ್ಜರಿಯಾಗಿ ನಡೆಯುತ್ತಿದೆ. ಕೆಲವರು ಇದಕ್ಕೆ ಹಣ ಕಟ್ಟುವವರೂ ಇದ್ದಾರೆ. ಕೆಲವೊಂದು ತೆಂಗು ಅನೇಕ ತೆಂಗಿನಕಾಯಿಯನ್ನು ಒಡೆದುಹಾಕುತ್ತದೆ. ಹೀಗೆ ಕೆಲವರು ಹಲವಾರು ತೆಂಗಿನ ಕಾಯಿ ಸಂಗ್ರಹಿಸುತ್ತಾರೆ. ಇದರಿಂದ ನಂತರದ ದಿನಗಳಲ್ಲಿ ಎಣ್ಣೆ ತೆಗೆಯಲಾಗುತ್ತದೆ.
ತೆಂಗಿಗೂ, ತುಳುವರಿಗೂ ಅವಿನಾಭಾವ ಸಂಬಂಧವಿರುವುದರಿಂದ ಪ್ರತೀ ವರುಷ ಅಷ್ಟಮಿಯಂದು ಬಾಂಧವ್ಯ ಬೆಸೆಯುವ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ.

By suddi9

Leave a Reply

Your email address will not be published. Required fields are marked *