ಕುಡುಪು: ಶ್ರೀ ಕ್ಷೇತ್ರ ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಫೆ.20ರಂದು ಮಂಗಳವಾರ ಸಂಜೆ 6.ಕ್ಕೆ ಮಹಾ ಆಶ್ಲೇಷ ಬಲಿ ನಡೆಯಲಿದೆ.
ಬೆಳಗ್ಗೆ 5. ರಿಂದ ಪ್ರಾಯಶ್ಚಿತ ಹೋಮ ,7.30ಕ್ಕೆ ನಾಗಬನದಲ್ಲಿ ನಾಗದೇವರಿಗೆ ಕಲಶಾಭಿಷೇಕ,ಪ್ರಸನ್ನ ಪೂಜೆ, ಸರ್ಪ ಸೂಕ್ತ ಹೋಮ , ಮೃತ್ಯುಂಜಯ ಹೋಮ, ಬ್ರಹ್ಮಚಾರಿ ಆರಾಧನೆ,ಮಧ್ಯಾಹ್ನ 11. ಗಂಟೆಗೆ ಮಹಾಪೂಜೆ ನೆಡೆಯಲಿದೆ. ಸಂಜೆ 6. ರಿಂದ ದೇವಾಲಯದ ಹೊರಾಂಗಣದಲ್ಲಿ ಎಕಕಾಲದಲ್ಲಿ 48 ಆಶ್ಲೇಷ ಬಲಿ ನಡೆಯಲಿದ್ದು ಬಳಿಕ ರಾತ್ರಿ 7 ರಿಂದ ಪೂಜೆ ನಿತ್ಯ ಬಲಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2 ರಿಂದ 4.30ರವರೆಗೆ ಮಕ್ಕಳ ಯಕ್ಷಗಾನ .ಬಳಿಕ ನೃತ್ಯ ಸಿಂಚನ, ಭಕ್ತಿ ಸಂಗೀತ, ಶಾಸ್ತ್ರೀಯ ವಾದ್ಯ ಸಂಗೀತ ಕಾರ್ಯಕ್ರಮ ಜರುಗಲಿದೆ. ಎಂದು ದೇವಳದ ಪ್ರಕಟಣೆ ತಿಳಿಸಿದೆ.
