150218_j.r (4)

ಮಂಗಳೂರು:  ನಗರದ ಸೆಬೆಸ್ಟಿಯನ್ ಸಭಾಂಗಣದಲ್ಲಿ ನಡೆದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಜನರಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್ ಲೋಬೊ ಸಾಂಕೇತಿಕವಾಗಿ ಚಾಲನೆ ನೀಡಿದರು.

ಬಳಿಕ  ಅವರ ಮಾತನಾಡಿ, ಮಂಗಳೂರಿನ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಜನರಿಗೆ ಹಕ್ಕು ಪತ್ರ ವಿತರಿಸಲಾಗುವುದು. ಇಂದು 400 ಜನರಿಗೆ ಹಕ್ಕು ಪತ್ರ ವಿತರಿಸುತ್ತೇವೆ.

150218_j.r (2)

ಈ ಭಾಗದ ಗ್ರಾಮ ಕರುಣಿಕರ ಕರ್ತವ್ಯ ನಿಷ್ಠೆಯಿಂದ ಈ ಕಾರ್ಯವನ್ನು ಸಾಧಿಸಿದ್ದೇವೆ ಎಂದವರು, ಕ್ಷೇತ್ರದಲ್ಲಿ  4000 ಸಾವಿರ ಜನರು ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಈಗಾಗಲೇ 1000 ಸಾವಿರ ಜನರಿಗೆ ಶಕ್ತಿ ನಗರದಲ್ಲಿ ಫ್ಲಾಟ್ ಮಾದರಿ ನಿವೇಶನ ನೀಡಲಾಗುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.

By Suddi9

Leave a Reply

Your email address will not be published. Required fields are marked *