ಬಂಟ್ವಾಳ: ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾತ್ರೋತ್ಸವವು ಫೆ.14 ರಂದು ಪೂರ್ವ ಸಂಪ್ರದಾಯದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಸಂಭ್ರಮದಿಂದ ಜರಗಿತು.
ಫೆ.14ರಂದು ಬೆಳಗ್ಗೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ದರ್ಶನಬಲಿ, ಮಧ್ಯಾಹ್ನ ಮಹಪೂಜೆ, ಅನ್ನಸಂತರ್ಪಣೆ, ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಪಾರ್ವತಿ ಪರಮೇಶ್ವರ ದೇವರ ಭೇಟಿ, ಚಂದ್ರ ಮಂಡಲ ಉತ್ಸವ, ಬೆಳಗ್ಗೆ ಶಯನೋತ್ಸವ, ಕವಾಟ ಬಂಧನ,ಪ್ರಸಾದ ವಿತರಣೆ ನಡೆಯಿತು.
ಫೆ.15ರಂದು ಬೆಳಗ್ಗೆ ಮಹಾರಥೋತ್ಸವ, ದೈವದ ನೇಮೋತ್ಸವ, ಮಹಾಪೂಜೆಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ, ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಕಕ್ಯಪದವು ಕಕ್ಯಪದವು ಗರಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಪಂಜಿಕಲ್ಲು ಗರಡಿ ಅಧ್ಯಕ್ಷ ಶ್ರೀಪ್ರಕಾಶ್ ಜೈನ್ ಪೀರ್ದಬೆಟ್ಟು, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ತಾ.ಪಂ.ಸ್ಥಾಯಿ ಸಮಿತಿಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಪ್ರಮುಖರಾದ ವೆಂಕಟರಮಣ ಮುಚ್ಚಿನ್ನಾಯ, ಗಣಪತಿ ಮುಚ್ಚಿನ್ನಾಯ, ಮಾಣಿಕ್ಯರಾಜ್ ಜೈನ್, ರಾಜ್ ಪ್ರಸಾದ್ ಆರಿಗ, ಧನಂಜಯ ಹೆಗ್ಡೆ, ದೇವಳದ ಪ್ರಧಾನ ಅರ್ಚಕರಾದ ನಟರಾಜ ಉಪಾಧ್ಯಾಯ, ಜಯಶಂಕರ ಉಪಾಧ್ಯಾಯ, ಅರ್ಚಕರಾದ ಮಿಥುನ್‍ರಾಜ್ ನಾವುಡ,ರಾಘವೇಂದ್ರ ಭಟ್,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜನಾರ್ಧನ ಆಚಾರ್ಯ ಬಿ.,ಯು.ಸದಾಶಿವ ಪ್ರಭು,ಟಿ.ಕೃಷ್ಣಪ್ಪ ಗೌಡ, ಪಿ.ವಿಶ್ವನಾಥ ಪೂಜಾರಿ,ವೆಂಕಪ್ಪ ನಾಯ್ಕ,ಪಿ.ಸುಜಲ ಶೆಟ್ಟಿ,ಸವಿತಾ ಮತ್ತು ಸಿಬಂದಿ ವರ್ಗ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಶಯನೋತ್ಸವ,ಶಯನ ಸೇವೆ
ಶ್ರೀ ಕ್ಷೇತ್ರ ಕಾರಿಂಜದಲ್ಲಿ ಜಾತ್ರೋತ್ಸವ ಸಂದರ್ಭದಲ್ಲಿ ದೊರಕುವ ವಿಶೇಷ ಸೇವೆಗಳಲ್ಲಿ ಶಯನ ಸೇವೆ ಅಪೂರ್ವವಾದುದು. ರಾತ್ರಿ ಶ್ರೀ ಪರಮೇಶ್ವರ ದೇವರು ಮೇಲಿನ ದೇವಸ್ಥಾನದಿಂದ ಇಳಿದು ಬರುವಾಗ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಪಾರ್ವತಿಯನ್ನು ಭೇಟಿಯಾಗುವ ಸನ್ನಿವೇಶ ಭಗವದ್ಭಕ್ತರಿಗೆ ತನ್ಮಯತೆಯನ್ನುಂಟು ಮಾಡುತ್ತದೆ. ಬಳಿಕ ಗರ್ಭಗುಡಿಯಲ್ಲಿ ಶಯನೋತ್ಸವ ,ಕವಾಟ ಬಂಧನ ನಡೆಸಲಾಗುತ್ತದೆ. ಮರುದಿನ ಬೆಳಗ್ಗೆ ಕವಾಟೋದ್ಘಾಟನೆಯಾಗುವಾಗ ಪಾರ್ವತಿ ಪರಮೇಶ್ವರ ದೇವರ ದರ್ಶನ ಮಾಡುವುದೇ ಶಯನ ಸೇವೆ.
ಇಲ್ಲಿ ಜಿಲ್ಲೆಯಲ್ಲಿಯೇ ಆಪರೂಪವಾದ ಶಿವ ಪಾರ್ವತಿ ಸಾನ್ನಿಧ್ಯವಿದ್ದು, ಶಿವನು ಪುರುಷ ರೂಪಿಯಾಗಿ ಪ್ರಕೃತಿರೂಪಿ ಪಾರ್ವತಿಯೊಡಗೂಡಿ ದರ್ಶನ ನೀಡುವುದರಿಂದ ವಿವಾಹ ಯೋಗ ಲಭಿಸುವುದೆಂದು ಪ್ರತೀತಿ ಇದೆ.
