ಕೈಕಂಬ: ಇಲ್ಲಿನ ಠಾಣಾ ವ್ಯಾಪ್ತಿಯ ಗುರುಪುರ ಬಂಡಸಾಲೆ ಎಂಬಲ್ಲಿ ನೀರಿನ ಆಳವಾದ ಹಳ್ಳಕ್ಕೆ ತಾವರೆ ಹೂ ಹೆಕ್ಕಲು ಹೋದಾತ ನೀರುಪಾಲಾದ ಘಟನೆ ಆದಿತ್ಯವಾರ ಮಧ್ಯಾಹ್ನ ಎರಡರ ಸುಮಾರಿಗೆ ನಡೆದಿದೆ, ನೀರುಪಾಲಾದ ವ್ಯಕ್ತಿಯನ್ನು ಬಡಗಎಡಪದವು= ಮಿಜಾರ್ ನಿವಾಸಿ ನಾರಾಯಣ ಎಂಬವರ ಪುತ್ರ ಪುರುಷೋತ್ತಮ(34) ಎಂದು ಗುರುತಿಸಲಾಗಿದೆ, ಈ ಘಟನೆಯಿಂದ ಅಷ್ಟಮಿ ಆಚರಿಸಬೇಕಾಗಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಘಟನೆಯ ವಿವರ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪುರುಷೋತ್ತಮ ಅವರ ಪತ್ನಿ ಕೃಷ್ಣ ಪರಮಾತ್ಮನಿಗೆ ಹೂ ಇಡಲೆಂದು ಗಂಡನನ್ನು ಹೂ ತರಲೆಂದು ಕಳಿಸಿದ್ದರು. ಅದರಂತೆ ಹೂ ತರಲು ಹೋದ ಪುರುಷೋತ್ತಮ ಕಾರ್ಯನಿಮಿತ್ತ ಗುರುಪುರ ಸಮೀಪದ ಬಂಡಸಾಲೆ ಎಂಬಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಬಂಡಸಾಲೆ ಸಮೀಪದ ಆವೆ ಮಣ್ಣಿನ ಹಳ್ಳದಲ್ಲಿ ತಾವರೆ ಹೂವೊಂದು ನಳನಳಿಸಿ ನಿಂತಿರುವುದನ್ನು ಗಮನಿಸಿದ ಪುರುಷೋತ್ತಮ, ಈ ಹೂವನ್ನು ದೇವರಿಗಿಡಬೇಕೆಂಬ ನಿಟ್ಟಿನಲ್ಲಿ ತಾವು ಮೊದಲು ತಂದಿದ್ದ ಸೇವಂತಿ ಹೂ, ಕಿಸೆಯಲ್ಲಿದ್ದ ಮೊಬೈಲ್, ಪಸರ್್ ಹಾಗೂ ಅಂಗಿ ಪ್ಯಾಂಟನ್ನು ಕಳಚಿ ನೀರಿಗಿಳಿದಿದ್ದಾರೆ, ಆದರೆ ನೀರಲ್ಲಿದ್ದ ತಾವರೆ ಹೂವನ್ನು ಹೆಕ್ಕಲು ಸಾಧ್ಯವಾಗದೆ ನೀರಿನ ಆಳಕ್ಕೆ ಸಿಲುಕಿದ ಪುರುಷೋತ್ತಮ್ ನೀರಿಗೆ ಸಿಲುಕಿ ಕೊಚ್ಚಿಕೊಂಡು ಹೋಗಲಾರಂಭಿಸಿದ್ದಾರೆ.
ಪ್ರಾಣ ಭೀತಿಯಿಂದ ತನ್ನ ರಕ್ಷಿಸಿ ರಕ್ಷಿಸಿ ಎಂದು ಜೋರಾಗಿ ಕೂಗಿಕೊಂಡ ಪುರುಷೋತ್ತಮ ಅವರ ಧ್ವನಿ ಅಲ್ಲಿ ಹೋಗುತ್ತಿದ್ದ ಸ್ಥಳೀಯ ಮಹಿಳೆಯೋರ್ವರಿಗೆ ಕೇಳಿದ್ದು ಆಕೆ ತಕ್ಷಣ ಸುದ್ದಿ ಮುಟ್ಟಿಸಿ ಜನ ಸೇರಿಸಿದ್ದಾರೆ, ತಕ್ಷಣ ಊರವರೆಲ್ಲಾ ಸೇರಿ ಪುರುಷೋತ್ತಮ್ ಅವರ ಹುಡುಕಾಟ ನಡೆಸಿದರೂ ಶವ ಸಿಕ್ಕಿರಲಿಲ್ಲ, ಬಜ್ಪೆ ಪೊಲೀಸರಿಗೆ ಹಾಗೂ ಅಗ್ನಿ ಶಾಮಕ ದಳಕ್ಕೆ ತಕ್ಷಣ ಕರೆ ಮಾಡಿ ತಿಳಿಸಿದರಾದರೂ ಬರಲು ತಡವಾಯ್ತು.
ಈ ವೇಳೆ ಗುರುಪುರ ನಿವಾಸಿಗಳಾದ ರಫೀಕ್, ನವಾಜ್, ಸಂತೋಷ್, ಸಂಶುದ್ದೀಮ್ ಎಂಬ ತರುಣರು ನೀರಿಗೆ ದೋಟಿಯನ್ನು ಸಿಲುಕಿಸಿ ಪುರುಷೋತ್ತಮ್ ಅವರನ್ನು ಮೇಲಕ್ಕೆತ್ತಲು ಸಫಲರಾಗಿದ್ದಾರೆ, ಆದರೆ ಪುರುಷೋತ್ತಮ್ ಮಾತ್ರ ಶವವಾಗಿ ಮೇಲಕ್ಕೆ ಬಂದಿದ್ದಾರೆ, ಶವ ಮೇಲೆ ಬರುತ್ತಿದ್ದಂತೆ ಇತ್ತ ಅಗ್ನಿಶಾಮಕ ದಳ, ಅಂಬ್ಯುಲೆನ್ಸ್ ಹಾಗೂ ಬಜ್ಪೆ ಪೊಲೀಸರು ಆಗಮಿಸಿದ್ದಾರೆ.
ಮೃತದೇಹವನ್ನು ಗಂಜಿಮಠದ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಅಲ್ಲಿ ಶವಮಹಜರು ನಡೆಸಲಾಗಿದೆ. ಪುರುಷೋತ್ತಮ್ ಇವರಿಗೆ ಮದುವೆಯಾಗಿ ಒಂದು ವರ್ಷವಷ್ಟೇ ಕಳೆದಿದೆ, ಮಡದಿ ಆರು ತಿಂಗಳ ಗಭರ್ಿಣಿಯಾಗಿದ್ದು, ಮೇಸ್ತ್ರಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು, ಕೃಷ್ಣನಿಗೆ ಪೂಜೆ ಮಾಡಬೇಕೆಂದು ತಾವರೆ ಹೂ ತರಲು ನೀರಿಗೆ ಇಳಿದವರು ಕೊನೆಗೆ ಕೃಷ್ಣನ ಪಾದ ಸೇರಿದ್ದು ಮಾತ್ರ ವಿಪಯರ್ಾಸ, ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
