ಕೈಕಂಬ:ಎಸ್‍ಕೆಎಸ್‍ಎಸ್‍ಕೆ ಸಂಘಟನೆಯ ದ ಕ ಜಿಲ್ಲಾ ಸಮಿತಿ ಜ. 26ರಂದು ಸಂಜೆ ಗುರುಪುರ ಕೈಕಂಬದಲ್ಲಿ ಆಯೋಜಿಸಲಿರುವ ಬೃಹತ್ ಮಾನವ ಸರಪಳಿ ಪೂರ್ವಭಾವಿಯಾಗಿ ಗುರುಪುರಕ್ಕೆ ಹತ್ತಿರದ ಬಾಮಿ ಆಂಗ್ಲ ಮಾಧ್ಯಮ ಶಾಲೆಯ ಎದುರಿರುವ ಮೈದಾನದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಮೆಟ್ರೋ ಸಾಹುಲ್ ಹಮೀದ್ ಧ್ವಜಾರೋಹಣ ನೆರವೇರಿಸಿದರು.gur-jan-26-skssk-1

gur-jan-26-skssk-2

ಇದು ಗಣರಾಜ್ಯೋತ್ಸವದಂದು ಸಂಘಟನೆ ವತಿಯಿಂದ ನಡೆಯುತ್ತಿರುವ `ಸೌಹಾರ್ದ ಸಂಕಲ್ಪ’ದ ಕಾರ್ಯಕ್ರಮವಾಗಿದೆ. ಧ್ವಜಾರೋಹಣ ಸಮಾರಂಭದಲ್ಲಿ ಅಬ್ದಲ್ ಮಜೀದ್ ಸೂರಲ್ಪಾಡಿ, ರಿಯಾಜ್ ಮಿಲನ್, ಹಂಝಾ ಮಿಶ್ರಿಯಾ, ಮೊಹಮ್ಮದ್ ರೈಫಲ್, ರಫೀಕ್ ತಾರಿಕರಿಯ, ಮಜೀದ್ ದಾರಿಮಿ, ಹಂಝಾ ಮುಸ್ಲಿಯಾರ್, ಜಕ್ರಿ ಬೈಲುಪೇಟೆ, ಹಸನ್ ಬಂಗ್ಲೆಗುಡ್ಡೆ, ಜಿ ಎಂ ಸಾಹುಲ್ ಹಮೀದ್, ಅಫೀಲ್ ಕೈಕಂಬ(ಸಂಘಟನೆಯ ಮಾಧ್ಯಮ ಪ್ರತಿನಿಧಿ) ಮೊದಲಾದವರು ಇದ್ದರು. ಈ ಸಂದರ್ಭದಲ್ಲಿ ಸಾಹುಲ್ ಹಮೀದ್ ಮತ್ತು ಅಬ್ದುಲ್ ಮಜೀದ್ ಪ್ರಜಾಪ್ರಭುತ್ವ ದಿನ ಹಾಗೂ ಸಂಘಟನೆಯ ಸಾಧನೆಗಳ ಬಗ್ಗೆ ಮಾತನಾಡಿದರು.

By suddi9

Leave a Reply

Your email address will not be published. Required fields are marked *