ಬಡಗಬೆಳ್ಳೂರು: ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಇದರ ಆಶ್ರಯದಲ್ಲಿ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ ಬಟ್ಟಾಜೆಯಲ್ಲಿ 13ನೇ ವರ್ಷದ ಯಕ್ಷಗಾನ ಬಯಲಾಟದ ಸಂದರ್ಭ 2016-17ನೇ ಸಾಲಿನ ವಾರ್ಷಿಕ ಎಸ್.ಎಸ್. ಎಲ್.ಸಿ ಯಲ್ಲಿ89.28% ಅಂಕವನ್ನು ಪಡೆದ ಶೈಕ್ಷಣಿಕ ಪ್ರತಿಭೆ ಸುದೀಕ್ಷ್ ಅವರಿಗೆ ಗೌರವಾಭಿನಂದನೆಯನ್ನು ಜ.25ರಂದು ಬಟ್ಟಾಜೆಯಲ್ಲಿ ಮಾಡಲಾಯಿತು.26vp sudeeksh

ಈತ ಬಂಟ್ವಾಳ ತಾಲೂಕು ಬಡಗಬೆಳ್ಳೂರು ಗ್ರಾಮದ ಬಟ್ಟಾಜೆ ಶೇಖರ ಮೂಲ್ಯಹಾಗು ಜಯಂತಿ ದಂಪತಿಗಳ ಪುತ್ರ. ಈತನ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.

ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಅಧ್ಯಕ್ಷ ಸಂತೋಷ್ ಬಿ.ಕುಕ್ಕಾಜೆ, ಚರಣ್ ಕುಲಾಲ್ ಬಟ್ಟಾಜೆ, ರಮೇಶ್ ಬಟ್ಟಾಜೆ,ಮನೋಜು ಕುಮಾರ್ ಕೊಪ್ಪಲ, ಸುಧಾಕರ ಶೆಟ್ಟಿ, ಹರೀಶ್ ಬಿ.ಬಟ್ಟಾಜೆ, ಜಿತೇಶ್ ಕುಲಾಲ್ ಬಟ್ಟಾಜೆ,ನವೀನ್ ಬಿ. ಬಟ್ಟಾಜೆ, ದರ್ಣಪ್ಪ ಕುಲಾಲ್, ಜಗದೀಶ ಕೊಪ್ಪಲ, ಕಿಶಾನ,ಕರುಣಾಕರಶೆಟ್ಟಿ ಭಾಗಂತ್ರಬೈಲು, ಬಾಲಕೃಷ್ಣ ಕುಲಾಲ್, ಸುರೇಶ್ ಕೊಪ್ಪಲ, ಕುಸುಮಾಕರ ಬಟ್ಟಾಜೆ, ನಿತಿನ್ ಬಟ್ಟಾಜೆ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *