98749874

ಬಂಟ್ವಾಳ: ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಜನತೆಯ ಕೆಂಗಣ್ಣಿಗೆ ಗುರಿಯಾದ ಶಾಸಕ ಸುನೀಲ್ ಕುಮಾರ್ ವಿರುದ್ಧ  ಇದೀಗ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುನಿಲ್ ಕುಮಾರ್ ವಿರುದ್ಧ ವಿರುದ್ಧ ದೂರು ನೀಡಿರುವ ಕಾಂಗ್ರೆಸ್‌ ಕಾರ್ಯಕರ್ತ ಪ್ರಶಾಂತ್ ಕುಲಾಲ್‌, “ಸುನೀಲ್ ಕುಮಾರ್ ಧಾರ್ಮಿಕ ಭಾವನೆ ಕೆರಳುವಂತೆ ಭಾಷಣ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಜ. 23 ರಂದು ನಡೆದ ಪರಿವರ್ತನಾ ಯಾತ್ರೆಯ ಕಾರ್ಯಕ್ರಮದಲ್ಲಿ  ಸುನೀಲ್, ಬಂಟ್ವಾಳದಲ್ಲಿ ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್ ನಡುವೆ ಚುನಾವಣೆ ನಡಿತಾ ಇಲ್ಲ ಬದಲಾಗಿ ರಾಮ ವರ್ಸಸ್ ಅಲ್ಲಾಹುವಿನ ನಡುವೆ ಚುನಾವಣೆ ನಡಿತಾ ಇದೆ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದರು.

 

By suddi9

Leave a Reply

Your email address will not be published. Required fields are marked *