ಮಂಗಳೂರು: ಪ್ರಸಿದ್ಧ ಮುದ್ರಣಾಲಯಗಳಲ್ಲಿ ಒಂದಾದ ಮಂಗಳೂರಿನ ದಿಗಂತ ಮುದ್ರಣಕ್ಕೆ ಪಳ್ಳತ್ತಡ್ಕ ಶಾಲಾ ಮಕ್ಕಳು ಹಾಗೂ ಅಧ್ಯಾಪಕರು ಭೇಟಿಯಿತ್ತರು. ಶೈಕ್ಷಣಿಕ ಪ್ರವಾಸದ ಭಾಗವಾಗಿ ಸುಮಾರು 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ ದಿಗಂತ ಮುದ್ರಣಕ್ಕೆ ಸಂದರ್ಶನವಿತ್ತರು.
ಈ ವೇಳೆ ಬರಮಾಡಿಕೊಂಡ ಅಲ್ಲಿನ ಸಿಬ್ಬಂದಿವರ್ಗದವರು ಅಲ್ಲಿ ನಡೆಯುವ ಕೆಲಸಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಆನ್ಲೈನ್ ವಾರ್ತೆಗಳು, ಪ್ರಿಂಟರ್ ಮೂಲಕ ಸಾಗಿ ಪ್ರಿಂಟಿಂಗ್ ಯಂತ್ರದ ಮುಖಾಂತರ ವಾರ್ತಾಪತ್ರಿಕೆಗಳಲ್ಲಿ ಅಚ್ಚಾಗಿ ಬರುವ ಹಂತಗಳನ್ನು ತೋರಿಸಿ,ವಿವರಿಸಿ ಕೊಟ್ಟರು. ಅದಕ್ಕಾಗಿ ಪಯೋಗಿಸುವ ಕಚ್ಚಾವಸ್ತುಗಳ ಪರಿಚಯವನ್ನು ಮಾಡಿಕೊಟ್ಟರು. ಇದೆಲ್ಲವನ್ನು ಸುಲಲಿತವಾಗಿ ಮಕ್ಕಳಿಗೆ ಅರ್ಥ ವಾಗುವ ರೀತಿಯಲ್ಲಿ ತಿಳಿಸಿಕೊಟ್ಟವರು ಅಲ್ಲಿನ ಸಿಬ್ಬಂದಿ ಯವರಲ್ಲೊಬ್ಬರಾದ ಮಧುಸೂದನ ಪರಾಡ್ಕರ್.
ಅಲ್ಲಿನ ಕೆಲಸಕಾರ್ಯಗಲಿಗೆ ತಡೆಯಾಗದಂತೆ, ಮಕ್ಕಳಿಗೆ ನೋಡಲೂ ತಿಳಿಯಲೂ ಅನುಕೂಲವಾಗುವಂತಹ ವಾತಾವರಣವನ್ನು ನಿರ್ಮಿಸಲು ಅಧ್ಯಾಪಕರದಂತಹ ವಿಘ್ನೇಶ್ ರವರು ಮುಂದಾಳುತ್ವ ವಹಿಸಿದರು.
ಇನ್ನಿತರ ಅದ್ಯಾಪಕರಾದ ಶಾಲಿನಿ.ಮಣಿ.ಶರತ್ ಮಮತ,ಲತಾ ,ಮೋಹನನ್,ಸಹಕರಿಸಿದರು. ವಿದ್ಯಾರ್ಥಿನಿ ಸಾಯಿಕೀರ್ತನ ಧನ್ಯವಾದವಿತ್ತಳು.
