ಮಂಗಳೂರು: ವಿಚಾರಣಾಧೀನ ಕೈದಿಯೋರ್ವನ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿ ಆತನ ಹೆತ್ತವರಿಂದ ಹದಿನೈದು ಲಕ್ಷ ರೂ.ವಸೂಲಿ ಮಾಡಿದ ಘಟನೆ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಹಣ ಕಳೆದುಕೊಂಡ ವಿಚಾರಣಾಧೀನ ಕೈದಿಯನ್ನು ಸಿರಿನ್ ಎಂದು ಗುರುತಿಸಲಾಗಿದೆ.
ಐಒಬಿ ಬ್ಯಾಂಕ್ ನ ಕುಳಾಯಿ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಿರಿನ್ ಮಧುಸೂದನ್ ನನ್ನು 55 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ. ಈತನ ಸೆಲ್ ನಲ್ಲಿಯೇ ಇದ್ದ ಕೋಡಿಕೆರೆ ಗ್ಯಾಂಗ್ ನ ಐವರು ಸಂಸ್ಥೆಗೆ ವಂಚಿಸಿದ ಹಣದಲ್ಲಿ ತಮಗೂ ಪಾಲು ನೀಡುವಂತೆ ಸಿರಿನ್ ಮೇಲೆ ಹಲ್ಲೆ ನಡೆಸಿದ್ದಾರೆ. ಈತನ ಮನೆಯವರಿಗೆ ಜೈಲಿನಲ್ಲೇ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಮಣಿದ ಸಿರಿನ್ ಮನೆಯವರು 15 ಲಕ್ಷ ರೂ. ನೀಡಿದ್ದಾರೆ.
ಇನ್ನು ಈ ಬಗ್ಗೆ ಸಿರಿನ್ ಮನೆಯವರು ಬರ್ಕೆ ಠಾಣೆಗೆ ದೂರು ನೀಡಿದ್ದಾರೆ.

