ಮೂಡುಬಿದಿರೆ: ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಹಿಳೆಯರು ನಾಪತ್ತೆಯಾದ ಘಟನೆ ಮೂಡುಬಿದಿರೆ ಪೊಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.mbd_jan21_3 lakshmi bhatt (1)

*ಲಕ್ಷ್ಮೀ ಭಟ್..

ಮೊದಲ ಪ್ರಕರಣದಲ್ಲಿ ಪುತ್ತಿಗೆ ಗ್ರಾಮದ ಕೊಡ್ಯಡ್ಕ ನಿವಾಸಿ ವಿವಾಹಿತೆ ಮಂಜುಳಾ(28) ಜನವರಿ 11ರಂದು ಕೋಲಾರದಲ್ಲಿರುವ ಗುರುಕುಲ ಆಶ್ರಮಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಆಕೆಯ ಪತಿ ನಾರಾಯಣ ರಾವ್ ಎಂಬವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಪ್ರಾಂತ್ಯ ಗ್ರಾಮದ ಕೊಡಂಗಲ್ಲು ಎಂಬಲ್ಲಿನ ವಿವಾಹಿತೆ ಲಕ್ಷ್ಮೀ ಭಟ್(25)ಎಂಬವರು ಜನವರಿ 19ರಂದು ಮನೆಯಿಂದ ನಾಪತ್ತೆಯಾಗಿದ್ದಾರೆ. ಈಕೆಯ ಪತಿ, ಅತ್ತೆ ಹಾಗೂ ಇಬ್ಬರು ಚಿಕ್ಕ ಮಕ್ಕಳು ದೇವಸ್ಥಾನಕ್ಕೆ ಹೋಗಿದ್ದರು. ಮನೆಯಲ್ಲಿ ಲಕ್ಷ್ಮಿ ಒಬ್ಬರೆ ಉಳಿದಿದ್ದರು. ಮನೆಯವರು ದೇವಸ್ಥಾನದಿಂದ ಸಂಜೆ ವಾಪಾಸು ಬಂದಾಗ ಲಕ್ಷ್ಮಿ ಮನೆಯಲ್ಲಿರಲಿಲ್ಲ. ಪತ್ನಿ ನಾಪತ್ತೆ ಬಗ್ಗೆ ಪತಿ ವಿಶ್ವನಾಥ ಭಟ್ ನೀಡಿದ ದೂರಿನಂತೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

By suddi9

Leave a Reply

Your email address will not be published. Required fields are marked *