ಬಂಟ್ವಾಳ: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕೆಜೆಪಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದು ಕೆಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಬೆಂಗಳೂರು ಅವರು ಹೇಳಿದ್ದಾರೆ. ಅವರು ಶುಕ್ರವಾರ ಬಿ.ಸಿ.ರೊಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ೨೨೪ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಯಾರೂ ಸ್ಪಷ್ಟ ಬಹುಮತ ಪಡೆಯುವುದಿಲ್ಲ, ಕೆಜೆಪಿ ಕನಿಷ್ಠ ೮೦ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದು , ನಾವು ಯಾವ ಪಕ್ದದ ಜೊತೆಗೆ ಹೊಂದಾಣಿಕೆ ಮಾಡಿವುದಿಲ್ಲ, ಉಳಿದ ಪಕ್ಷ ನಮ್ಮ ಜೊತೆ ಬರುವ ಸ್ಥಿತಿ ನಿರ್ಮಾಣ ವಾಗುತ್ತದೆ ಕಾದು ನೋಡಿ ಎಂದುಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದ.ಕ.ಜಿಲ್ಲೆಯಲ್ಲೂ ಪಕ್ಷ ಖಾತೆ ತೆರೆಯಲಿದ್ದು, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರು ಬಿಜೆಪಿ ಸಂಪರ್ಕದಲ್ಲಿದ್ದು, ಶೀಘ್ರವೇ ಬಿಜೆಪಿ ಸೇರಲಿದ್ದಾರೆ ಎಂದು ಸುಳಿವು ನೀಡಿದ ಅವರು ಕೆಜೆಪಿಯು 100 ಕ್ಷೇತ್ರಗಳ ಅಭ್ಯರ್ಥಿ ಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಅತೀ ಶೀಘ್ರ ಘೋಷಣೆ ಮಾಡಲಾಗುವುದು ತಾನು ತರೆದಾಳ ಮತ್ತು ಶಿಕಾರಿಪುರ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಲು ಯೋಚಿಸಿದ್ದಾಗಿ ತಿಳಿಸಿದರು. ಉ.ಕರ್ನಾಟಕ,ಹೈದರಬಾದ್ ಕರ್ನಾಟಕ ಭಾಗದ ಹಲವಾರು ಕಾಂಗ್ಎಸ್,ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದ ಅವರು ದಕ್ಷಿಣ ಕರ್ನಾಟಕ ಭಾಗದ ಜೆಡಿಎಸ್ ನ ಪ್ರಮುಖ ನಾಯಕರು ಪಕ್ಷವನ್ನ ಸೇರಲಿದ್ದಾರೆ ಎಂದರು.ಕರಾವಳಿ ಭಾಗದಲ್ಲಿ ಕ್ಷುಲ್ಲಕ ವಿಚಾರದಲ್ಲಿ ಗಲಭೆಗಳು ನಡೆಯುತ್ತಿರುವುದು ನೋವಿನ ಸಂಗತಿ ಎಂದ ಅವರು ಕಾಟಿಪಳ್ಳದಲ್ಲಿ ನಡೆದ ದೀಪಕ್ ಹತ್ಯೆ ಪಕ್ಷ ಖಂಡಿಸುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಪ್ರಕಾಶ್ ಬಾಬು ಉಪಸ್ಥಿತರಿದ್ದರು.
