ಬಂಟ್ವಾಳ: ರೋಟರಿ ಸಮುದಾಯದಳ, ಕಡೇಶಿವಾಲಯ ಇದರ  29ನೇ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಪೆರ್ಲಾಪು ಶಾಲಾ ಮೈದಾನದಲ್ಲಿ ನಡೆಯಿತು.ಸಭೆಯ ಅಧ್ಯಕ್ಷ ತೆಯನ್ನು ರೋಟರಿ ಪಿ.ಎಚ್.ಎಪ್. ಸಂಜೀವ ಪೂಜಾರಿ ವಹಿಸಿ ಮಾತನಾಡಿದ ಅವರು ಅಂತರಾರ್ಷ್ಟೀಯ ಮಟ್ಟದಲ್ಲಿ ಗುರುತಿಸಿದ ಈ ಸಂಸ್ಥೆಗೆ ಜನಪರ ಸೇವೆಯನ್ನು ಮಾಡುವುದೇ ಗುರಿ. ನಾಯಕತ್ವವನ್ನು ಬೆಳೆಸುವ ಮತ್ತು ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರಮುಖ ವೇದಿಕೆಯಾಗಿದೆ ಎಂದು ಅವರು ಹೇಳಿದರು.1 (5)

ಜನ ಜಾಗ್ರತಿ ವೇದಿಕೆ ಯ ಸಂಪನ್ಮೂಲ ಅಧಿಕಾರಿ ಗಣೇಶ್ ಆಚಾರ್ಯ ಮಾತನಾಡಿ ದುಶ್ಚಟಗಳಿಂದ ದೂರವಿದ್ದು ಸಮಾಜಮುಖಿ ಕೆಲಸ ಮಾಡಲು ಇಂತಹ ವೇದಿಕೆ ಸಹಕಾರಿಯಾಗುತ್ತದೆ. ಉತ್ತಮ‌ ವ್ಯಕ್ತಿತ್ವವನ್ನು ರೂಪಿಸುವುದೇ ಸಂಘಸಂಸ್ಥೆಗಳ ಪ್ರಥಮ ಆದ್ಯತೆಯಾಗಬೇಕು. ವ್ಯಕ್ತಿತ್ವ ವಿಕಸನಕ್ಕೆ ಈ ಸಂಸ್ಥೆ ದಾರಿಯಾಗಿದೆ ಸಮಾಜ ಕಟ್ಟುವ ಕೆಲಸ ಈ ಸಂಸ್ಥೆ ಮಾಡುತ್ತದೆ ಎಂದರು.4

ಡಾ! ಈಶ್ವರ ಪ್ರಕಾಶ್ ಮಾತನಾಡಿ ಉತ್ತಮ ಕೆಲಸ ನಿಶ್ವಾರ್ಥ ಸೇವೆ ನಿರಂತರವಾಗಿ ನಡೆಯಲಿ ಎಂದರು. ವಿಶೇಷ ಅಹ್ವಾನಿತ ಚಲನಚಿತ್ರ ನಟ ರಘು ಭಟ್, ಸಮುದಾಯ ದಳದ ಸಲಹಾ ಸಮಿತಿ‌ ಅಧ್ಯಕ್ಷ ಕೆ.ಕೆ.ಶೆಟ್ಟಿ ಕುರುಂಬ್ಲಾಜೆ,ಸಮುದಾಯ ದಳದ ಅದ್ಯಕ್ಷ ಡಿ.ಸಂಜೀವ ಪೂಜಾರಿ, ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಂ.ವಿ.ಉಪಸ್ಥಿತರಿದ್ದರು. ‌ಇದೇ ಸಂದರ್ಭದಲ್ಲಿ ಕಡೇಶ್ವಾಲ್ಯ ವ್ಯ.ಸೇ.ಸ.ಸಂಘ.ನಿ.ಇದರ ನಿವ್ರತ್ತ ಮುಖ್ಯಕಾರ್ಯನಿರ್ವಾಣಾಧಿಕಾರಿ ಜಯರಾಮ ಶೆಟ್ಟಿ ಅಮೈ ನಡ್ಯೆಲು ಅವರನ್ನು ಸನ್ಮಾನಿಸಲಾಯಿತು.3 (1)

2 (2)

ಚದುರಂಗದ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಕು! ಯಶಸ್ವಿ ಕೆ.ಕುದುಮಾನ್ ಅವರಿಗೆ ಚದುರಂಗ ಪುರಸ್ಕಾರ, ರಂಗಕಲಾವಿದ ಚಂದ್ರಶೇಖರ ಆಚಾರ್ಯ ಚಿನ್ನಯಕಟ್ಟೆ ಅವರಿಗೆ ರಂಗಶ್ರೀ ಪುರಸ್ಕಾರ ಮತ್ತು ಕಡೇ ಶಿವಾಲಯ ಸರಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾ.ಶಾಲೆಯ  10 ನೇ ಹಾಗೂ7 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಾಜಿ ಅದ್ಯಕ್ಷ ಗೋಪಾಲಕೃಷ್ಣ ಭಟ್ ವರದಿ ವಾಚಿಸಿದರು.ರೋಟರಿ ಸಮುದಾಯದಳದ ಅದ್ಯಕ್ಷ ಸಂಜೀವ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರದೀಪ್ ವಂದಿಸಿದರು.ಪೂವಪ್ಪ ಮುಂಡಾಲೆ ಮತ್ತು ಯೋಗಿಶ್ ನಾಯ್ಕ ಡಾಲಿಂಬ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *