ಪೊಳಲಿ: ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನಮ್ ಧರ್ಮಸ್ಥಳ ಇಲ್ಲಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರ “ಗುರುವಂದನಾ ಹಾಗೂ ಸೀತಾರಾಮಕಲ್ಯಾಣೋತ್ಸವ”ವು ಫೆಬ್ರವರಿ 18 ರಂದು ಭಾನುವಾರ ಬಂಟ್ವಾಳ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಹತ್ತಿರದ ಗದ್ದೆಯ ಆತ್ಮಾನಂದ ಸರಸ್ವತಿ ವೇದಿಕೆಯಲ್ಲಿ ಜರುಗಲಿದೆ. ಆ ಪ್ರಯುಕ್ತ ಬಂಟ್ವಾಳ ತಾಲೂಕಿನ ರಾಮ ಕ್ಷೇತ್ರದ ಕರಿಯಂಗಳ ಹಾಗೂ ಅಮ್ಮುಂಜೆ ಗ್ರಾಮದ ಸಮಿತಿಯನ್ನು ಶನಿವಾರ ಬಡಕಬೈಲು ನಾರಾಯಣ ಪೂಜಾರಿಯವರ ಮನೆಯಲ್ಲಿ ರಚಿಸಲಾಯಿತು.
ಈ ಕಾರ್ಯಕ್ರಮದ ಉದ್ದೇಶ ಈ ಸಮಾಜದಲ್ಲಿರುವ ಶೋಷಿತ ವರ್ಗದ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಚಿಂತನೆಯೊಂದಿಗೆ ಬಾಳ್ತಿಲ ಗ್ರಾಮದಲ್ಲಿ ಜಾಗ ಖರೀದಿಸಿ ಶಾಲೆ ಕಟ್ಟುವ ಮಹತ್ತರವಾದ ಉದ್ದೇಶವನ್ನಿಟ್ಟುಕೊಂಡು ಧಾರ್ಮಿಕ ಶಿಕ್ಷಣ ಪರಂಪರೆಯ ಶಿಕ್ಷಣ ನೀಡುವ ಅಲೋಚನೆಯೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಂದು ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ತಿಳಿಸಿದರು.ಈಗಾಗಲೇ ಮೆಲ್ಕಾರ್‍ನಲ್ಲಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬಂಟ್ವಾಳ ತಾಲೂಕಿನ 84 ಗ್ರಾಮಗಳ ಪ್ರಮುಕರ ಸಭೆ ಕರೆದು ಕ್ಷೇತ್ರ ಸಮಿತಿ ರಚಿಸಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ರಾಮಕ್ಷೇತ್ರ ಬಂಟ್ವಾಳ ತಾಲೂಕಿನ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಬೊಳ್ಳಾಯಿ, ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಸ್ವಾಗತ ಸಮಿತಿ ಅಧ್ಯಕ್ಷ ಭುವನೇಶ್ ಪಚಿನಡ್ಕ, ಸ್ವಾಗತ ಸಮಿತಿ ಸಂಚಾಲಕ ಬೇಬಿ ಕುಂದರ್, ತಾಲೂಕು ಸಂಘಟನಾ ಕಾರ್ಯದರ್ಶಿಗಳಾದ ಸುಕೇಶ್ ಚೌಟ ಮತ್ತು ಚರಣ್ ಪೂಜಾರಿ, ಹಿರಿಯರಾದ ರಾಮಪ್ಪ ಪೂಜಾರಿ,ಚಂದ್ರಶೇಖರ ಶೆಟ್ಟಿ,ಸುರೇಶ್ ಮಣಿಕಂಠಪುರ, ಬಾಲಕೃಷ್ಣ ಮಸ್ಟರ್ ಮಣಿಕಂಠಪುರ, ಜನಾರ್ಧನ ಬಾರಿಂಜೆ, ಗಂಗಾಧರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಯಶವಂತ ಪೂಜಾರಿ ಧನ್ಯವಾದವಿತ್ತರು.
