ಬಂಟ್ವಾಳ: ರಾಮಾಯಣ ಮತ್ತು ಮಹಾಭಾರತ ಭಾರತೀಯರ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ಸಂಗಬೆಟ್ಟು ಸಮೀಪದ ಪೂವಳ ಯೋಗದತ್ತ ಶ್ರೀ ರಾಮಾಂಜನೇಯ ಮಂದಿರದಲ್ಲಿ ರವಿವಾರ ಆರಂಭಗೊಂಡ ಏಳು ದಿನಗಳ ತುಳು ರಾಮಾಯಣ ಸಪ್ತಾಹ ವಾಚನ-ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.25btl-Ramayana

ಮಂದಾರ ರಾಮಾಯಣ ಎಂಬ ಮಹಾಕಾವ್ಯದಲ್ಲಿ ತುಳು ಸಂಸ್ಕ್ರತಿ ಮತ್ತು ಆಧ್ಯಾತ್ಮ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಈ ವೇಳೆ  ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಕೆ. ರಘುರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಉದ್ಯಮಿ ಕೆ. ಶ್ರೀಪತಿ ಭಟ್ ಮೂಡುಬಿದ್ರೆ ಶುಭ ಹಾರೈಸಿದರು. ತುಳು ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಗಾಯಕ ತೋನ್ಸೆ ಪುಷ್ಕಳ ಕುಮಾರ್, ಕಾರ್ಯಕ್ರಮ ಸಂಯೋಜಕ ಸರಪಾಡಿ ಅಶೋಕ ಶೆಟ್ಟಿ, ಧರ್ಣಪ್ಪ ಶೆಟ್ಟಿ ಪೂವಳ, ಶ್ರೀ ರಾಮಾಂಜನೇಯ ಸೇವಾ ಬಳಗ ಅಧ್ಯಕ್ಷ ಅಣ್ಣಿ ಶೆಟ್ಟಿ ಪೂವಳ, ಪ್ರಮುಖರಾದ ಜಗತ್ಪಾಲ ಶೆಟ್ಟಿ ಉಮನೊಟ್ಟು, ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಪ್ರಫುಲ್ಲಚಂದ್ರ ರೈ, ರಾಮಚಂದ್ರ ಶೆಟ್ಟಿಗಾರ್, ಮಹಾಬಲ ಶೆಟ್ಟಿ ನಂದಗೋಕುಲ, ಎ.ವಿಜಯ ರೈ ಆಲದಪದವು, ವಸಂತ್ ಕುಮಾರ್ ಅಣ್ಣಳಿಕೆ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಅರುಣಾ ಎಸ್. ಶೆಟ್ಟಿ ಮತ್ತಿತರರು ಇದ್ದರು.

ವಿಜೇತ್ ಶೆಟ್ಟಿ ಪೂವಳ ವಂದಿಸಿದರು. ಉಪನ್ಯಾಸಕ ಡಾ. ಯೋಗಿಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *