IMG_5469 gokulotsava_resize - Copy

ಬಂಟ್ವಾಳ:ಆಧ್ಯಾತ್ಮಕ ಶಕ್ತಿಯ ಮೂಲಕ ಭಾರತ ವಿಶ್ವ ಗುರುವಾಗುವಲ್ಲಿ ಮುಂದಡಿ ಇಡುತ್ತಿದೆ. ಈಗಾಗಲೇ ವಿಶ್ವಕ್ಕೆ ಭಾರತೀಯ ಆಧ್ಯಾತ್ಮಕ ಶಕ್ತಿಯ ಪರಿಚಯ ವಾಗುತ್ತಿದೆ. ಸ್ವಾಮಿ ವಿವೇಕಾನಂದ ಸ್ವಾಮಿಯವರಂತಹ ಸಂತರು ಆಗಲೇ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿದ್ದರಾದರೂ ಮುಂದಿನ ಪೀಳಿಗೆಗಳು ಇದನ್ನು ಮುಂದುವರೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇರುವುದರಿಂದ ಎಳವೆಯಲ್ಲಿಯೇ ಭಾರತೀಯ ಸಂಸ್ಕ್ರತಿ, ಆಧ್ಯಾತ್ಮ ಚಿಂತನೆಗಳ ಅರಿವು ಮೂಡಿಸುವ ಕೆಲಸ ವಾಗಬೇಕಾಗಿದೆ. ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು.

ಅವರು ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಅಕ್ಕಮಹಾದೇವಿ ಶಿಶು ಮಂದಿರದಲ್ಲಿ ನಡೆದ ಬಾಲಗೋಕುಲಗಳ ‘ಸಮ್ಮಿಲನ ಗೋಕುಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

IMG_5479_resize - Copy

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ನಿವೃತ್ತ ಅಧಿಕಾರಿ ಇನ್ಸ್‍ಪೆಕ್ಟರ್ ಎಂ. ಆರ್. ನಾಯರ್, ಕಾರ್ಯಕ್ರಮದ ಅಧ್ಯಕ್ಷರಾದ ವಿ.ಪ್ರಭಾಕರ್ ಪೈ ಬಂಟ್ವಾಳ ಉಪಸ್ಥಿತರಿದ್ದರು. ದಾಮೋದರ ನೆತ್ತರಕೆರೆ ಪ್ರಾಸ್ತಾವಿಸಿ  ವಾಮನ ಪೂಜಾರಿ ಸ್ವಾಗತಿಸಿ, ಮನಿಷಾ  ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.

 

IMG_5457_resize

IMG_5452_resize

IMG_5490_resize

ಕಾರ್ಯಕ್ರಮಕ್ಕೂ ಮುನ್ನ ಬಿ.ಸಿ.ರೋಡು ನಾರಾಯಣಗುರು ವೃತ್ತದಿಂದ ಅಜ್ಜಿಬೆಟ್ಟು ಶಿಶುಮಂದಿರದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು.ಬಂಟ್ವಾಳ ತಾಲೂಕಿನ  ಸೂಮಾರು 28 ಬಾಲಗೋಕುಲಗಳ    ಪುಟಾಣಿಗಳು ಪೌರಾಣಿಕ ಪುಣ್ಯ ಪುರುಷರ ದೇವದೇವತೆಗಳ ವೇಷಭೂಷಣಗಳನ್ನು ಧರಿಸಿ ಶೋಭಾಯಾತ್ರೆಗೆ ಮೆರುಗು ನೀಡಿದರು.    ಬಾಲಗೋಕುಲದ ಪುಟಾಣಿಗಳು  ವಂದೇಮಾತರಂ ಕಂಠಪಾಠ,ಕಬೀರನ ದೋಹ, ದೇಶಭಕ್ತಿಗೀತೆ,ಭಾಷಣ ,ಕುಣಿತಭಜನೆ, ಮುಂತಾದ ಸ್ಫರ್ಧೆಗಳಲ್ಲಿ ಭಾಗವಹಿಸಿದರು. ಸುಮಾರು 50ಕ್ಕಿಂತಲೂ ಹೆಚ್ಚು ತಂಡಗಳು ಇದರಲ್ಲಿ ಭಾಗವಹಿಸಿದ್ದವು.

IMG_5249_resize

 

IMG_5245_resize

ಇದಕ್ಕೆ ಮೊದಲು ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದಿಂದ ಅಜ್ಜಿಬೆಟ್ಟು ಶಿಶು ಮಂದಿರದ ತನಕ ಭವ್ಯ ಶೋಭಾಯಾತ್ರೆಯನ್ನು ಕಲ್ಲಡ್ಕ ಪ್ರಭಾಕ ಭಟ್ ರವರು ತೆಂಗಿನ ಕಾಯಿ ಒಡೆದು  ಶ್ರೀ ಕೃಷ್ಣನ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ  ನೀಡಿದರು

 

 

IMG_5280_resize

 

IMG_5305_resize

 

IMG_5317_resize

 

IMG_5332_resize

ರಾಜೇಶ್ ನಾಯಕ್ ಉಳಿಪಾಡಿಗುತ್ತು , ವಕೀಲರಾದ  ಪ್ರಸಾದ್ ಬಿ.ಸಿ.ರೋಡು    ಹಾಗೂ  ಪುತ್ತೂರು ಜಿಲ್ಲಾ ಸಂಘ ಚಾಲಕರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿಯವರೊಂದಿಗೆ ಬಾಲಗೋಕುಲೋತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.IMG-20171225-WA0016-650x363

ಶೋಭಾಯಾತ್ರೆಯಲ್ಲಿ ಮಕ್ಕಳ ಪೋಷಕರು ,ಮಾತಾಜಿಯವರು ಮತ್ತು ಕಾರ್ಯಕರ್ತರು ಬಾಗವಹಿಸಿದ್ದರು .

* ವೀಡಿಯೋ  ನೋಡಲು ಇಲ್ಲಿ ಕ್ಲಿಕ್ ಕೊಡಿ *

By Suddi9

Leave a Reply

Your email address will not be published. Required fields are marked *