ಬೆಂಗಳೂರು : ಶಂಕರ ಮೂವೀಸ್ ನಿಮರ್ಿತ ‘ಅಧ್ಯಕ್ಷ’ ಚಲನಚಿತ್ರದ `ಓಪನ್ ಹೇರ್ ಬಿಟ್ಕೊಂಡು..’ ಹಾಡಿನಲ್ಲಿ ಶ್ರೀಕೃಷ್ಣ ವೇಶಧಾರಿಗಳೊಂದಿಗೆ ನಟ ಶರಣ ನೃತ್ಯ ಮಾಡುವಂತೆ ತೋರಿಸಿ ಹಿಂದೂಗಳ ಧಾಮರ್ಿಕ ಭಾವನೆಗೆ ನೋವನ್ನು ಉಂಟುಮಾಡಲಾಗಿತ್ತು. ಅಲ್ಲದೇ ಇದರ ಪೋಸ್ಟರ್ನಲ್ಲಿಯೂ ನಟ-ನಟಿಯರು ಶ್ರೀಕೃಷ್ಣ ವೇಶಧಾರಿಗಳಿಗೆ ಆಶೀರ್ವದಿಸುವಂತೆಯೂ ತೋರಿಸಿ, ಶ್ರೀ ಕೃಷ್ಣನ ಅಪಮಾನವನ್ನು ಮಾಡಲಾಗಿತ್ತು. ಇದು ಹಿಂದೂಗಳ ಧಾಮರ್ಿಕ ಭಾವನೆಗಳ ಮೇಲೆ ಮಾಡಿದ ಮಮರ್ಾಘಾತವಾಗಿದೆ. 

Meeting with Producer- (Large)
ಈ ಹಾಡನ್ನು ಚಲನಚಿತ್ರದಿಂದ ತೆಗೆದುಹಾಕುವಂತೆ ಮತ್ತು ಪೋಸ್ಟರ್ನ್ನು ಹಿಂಪಡೆಯಬೇಕೆಂದು ಎಲ್ಲಾ ಹಿಂದೂ ಸಂಘಟನೆಗಳು ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ಬಿಜಾಪುರ, ಹುಬ್ಬಳ್ಳಿ, ಹಳಿಯಾಳ, ಗದಗ, ಉಡುಪಿ, ಮಂಗಳೂರು, ಉತ್ತರಕನ್ನಡ ಮತ್ತು ಬೆಳಗಾಂ ಜಿಲ್ಲೆಗಳು ಸೇರಿದಂತೆ ಕನರ್ಾಟಕ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದವು.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಚಲನಚಿತ್ರ ಸೆನ್ಸಾರ್ ಮಂಡಳಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳಿಗೆ ಚಲನಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯುವುದಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಅಲ್ಲದೇ ಕನರ್ಾಟಕದ ಎಲ್ಲಾ ಜಿಲ್ಲೆಗಳಿಂದ ಅನೇಕ ಹಿಂದೂ ಸಂಘಟನೆಗಳು, ಧಮರ್ಾಭಿಮಾನಿಗಳು ಈ ಚಲನಚಿತ್ರದ ನಿಮರ್ಾಪಕರಿಗೆ ದೂರವಾಣಿ ಕರೆಯನ್ನು ಮಾಡುವುದರ ಮೂಲಕ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಅನೇಕ ಹಿಂದೂ ಸಂಘಟನೆಗಳು ಆಯಾಯ ಜಿಲ್ಲೆಯ ಸಿನೆಮಾ ಮಂದಿರದ ಮಾಲೀಕರಿಗೆ ಈ ಚಲನಚಿತ್ರವನ್ನು ಪ್ರದಶರ್ಿಸದಂತೆ ಮನವಿಯನ್ನು ನೀಡಿದ್ದರು.
ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮ ಸೇನೆ, ಹಿಂದೂಪರ ವಕೀಲರು ಸೇರಿಕೊಂಡು, ನಿಮರ್ಾಪಕರ ಜೊತೆಗೆ ಮೇಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯುವುದರ ಬಗ್ಗೆ ಚಚರ್ೆಯನ್ನು ನಡೆಸಿದ ಬಳಿಕ ನಿಮರ್ಾಪಕರಾದ ಶ್ರೀ. ಗಂಗಾಧರ್ ಇವರು ಮುಂದಿನ ಒಂದು ದಿನದಲ್ಲಿ ನನ್ನ ನಿಧರ್ಾರವನ್ನು ತಿಳಿಸುವುದಾಗಿ ಚಚರ್ೆಯಲ್ಲಿ ಒಪ್ಪಿಕೊಂಡರು.
ಒಂದು ದಿನ ಕಳೆದ ಬಳಿಕವು ತಮ್ಮ ನಿರ್ಣಯವನ್ನು ನಿಮರ್ಾಪಕರು ತಿಳಿಸಿದ ಕಾರಣ ಹೋರಾಟದ ಮುಂದಿನ ಹಂತವೆಂದು ಪೂಜ್ಯ ಪ್ರಣವನಾಂದ ಸ್ವಾಮೀಜಿಯವರು ಈ ಚಲನಚಿತ್ರದ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟನಲ್ಲಿ ದಿನಾಂಕ 12/8/2014 ರಂದು ದೂರನ್ನು ದಾಖಲಿಸಿದರು. ದೂರನ್ನು ಆಲಿಸಿದ ನ್ಯಾಯಾಮೂತರ್ಿಗಳಾದ ಶ್ರೀ ರವಿ ಇವರು ಚಲನಚಿತ್ರ ಬಿಡುಗಡೆ ಮಾಡದಂತೆ ನಿಮರ್ಾಪಕರಿಗೆ ಆದೇಶವನ್ನು ನೀಡಿದರು.
ದಿನಾಂಕ 13.8.2014 ರಂದು ಚಲನಚಿತ್ರ ನಿಮರ್ಾಪಕರು, ನ್ಯಾಯಲಯದ ಬಳಿ ಹಿಂದೂಗಳ ಧಾಮರ್ಿಕ ಭಾವನೆಗೆ ನೋವನ್ನುಂಟು ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸುತ್ತೇವೆ ಮತ್ತು ಈ ಚಲನಚಿತ್ರದಲ್ಲಿ ಇದ್ದ ಶ್ರೀಕೃಷ್ಣನ ವಿಡಂಬನೆ ಮಾಡುವ ದೃಶ್ಯವನ್ನು ಸಂಪೂರ್ಣವಾಗಿ ತೆಗೆಯಲಾಗಿದೆ” ಎಂಬ ಅಂಶಗಳನ್ನೊಳಗೊಂಡ ಅಫಿಡೆವಿಟ್ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಮೂತರ್ಿಗಳು
1.ಈ ಚಲನಚಿತ್ರವನ್ನು 15.8.2014 ರಂದು ಬಿಡುಗಡೆ ಮಾಡಬಹುದು.
2. ವಕೀಲರು ಸೇರಿದಂತೆ 5 ಜನರನ್ನು ಒಳಗೊಂಡ ಸಮಿತಿಯು ಚಲನಚಿತ್ರವನ್ನು ವೀಕ್ಷಿಸಬೇಕು.
3. ಈ ಚಲನಚಿತ್ರದ ಸಿಡಿಯನ್ನು ನಿಮರ್ಾಪಕರು ಆ ದಿನವೇ ನ್ಯಾಯಾಲಯಕ್ಕೆ ಒಪ್ಪಿಸಬೇಕು.
4. ಒಂದು ಪಕ್ಷ ಆಕ್ಷೇಪಾರ್ಹ ದೃಶ್ಯಗಳು ಕಂಡು ಬಂದಲ್ಲಿ ಚಲನಚಿತ್ರದ ಮೇಲೆ ತಕ್ಷಣ ನಿರ್ಬಂಧ ಹೇರಲಾಗುವುದು. ಮತ್ತು ಖಟ್ಲೆ ಮುಗಿಯುವ ವರೆಗೂ ಚಲನಚಿತ್ರವನ್ನು ಪ್ರದಶರ್ಿಸಲು ಅನುಮತಿ ನೀಡಲಾಗುವುದಿಲ್ಲ ಎಂಬ ಆದೇಶವನ್ನು ಹೊರಡಿಸಿದರು.
ಈ ರೀತಿಯಲ್ಲಿ ಹಿಂದೂಗಳ ಸಂಘಟಿತ ಹೋರಾಟದಿಂದ ಹಿಂದೂಗಳ ಧಾಮರ್ಿಕ ಭಾವನೆಗೆ ನೋವನ್ನು ಉಂಟು ಮಾಡುವ ದೃಶ್ಯಗಳನ್ನು ಯಶ್ವಸಿಯಾಗಿ ತೆಗೆದು ಹಾಕಲಾಯಿತು.
ಇನ್ನು ಮುಂದೆ ಯಾವುದೇ ಚಲನಚಿತ್ರದಲ್ಲಿ ಹಿಂದೂಗಳ ಧಾಮರ್ಿಕ ಭಾವನೆಗಳಿಗೆ ನೋವು ಆಗುವಂತ ದೃಶ್ಯ, ಹಾಡುಗಳನ್ನು ಚಿತ್ರೀಕರಣ ಮಾಡಬಾರದೆಂದು ಹಿಂದೂ ಸಂಘಟನೆಗಳು ಎಚ್ಚರಿಕೆಯ ಕರೆಯನ್ನು ನೀಡಿದೆ.

 

By suddi9

Leave a Reply

Your email address will not be published. Required fields are marked *