ಮಂಗಳೂರು: 13 ವರ್ಷಗಳ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಶಿವ ಫೈನಾನ್ಸ್ ಮಾಲಕ ವಿಶ್ವನಾಥ ರೈ ಅಲಿಯಾಸ್ ಬಡ್ಡಿ ವಿಶ್ವನ ಕೊಲೆ ಪ್ರಕರಣದ ಆರೋಪಿಯನ್ನು ಡಿಸಿಐಬಿ ಮತ್ತು ಉಪ್ಪಿನಂಗಡಿ ಪೊಲೀಸರು ತಮಿಳ್ನಾಡಿನಲ್ಲಿ ಬಂಧಿಸಿ ಕರೆತಂದಿದ್ದಾರೆ.
ವಿಶ್ವನಾಥ ರೈ ಅವರ ಫೈನಾನ್ಸ್ನಲ್ಲಿ ಮೆನೇಜರ್ ಆಗಿದ್ದ ಪಂಚಮಿ ವಿಶ್ವ ಯಾನೆ ರಾಜು(47) ಬಂಧಿತ ಆರೋಪಿ. 7-6-2001ರಂದು ವಿಶ್ವನಾಥ ರೈ ಅವರನ್ನು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಕೊಲೆಗೈದು ಕಾರಿನಲ್ಲಿ ಮೃತದೇಹವನ್ನು ಹೊನ್ನಾವರಕ್ಕೆ ಸಾಗಿಸಿದ್ದ ಆರೋಪಿ ಅಲ್ಲಿ ಶವವನ್ನು ಎಸೆದು ಬಳಿಕ ಮಂಗಳೂರಿನ ಕದ್ರಿ ಪಾಕರ್್ ಬಳಿ ಕಾರನ್ನು ತೊರೆದು ಪರಾರಿಯಾಗಿದ್ದ.
ಆರೋಪಿ ರಾಜು ತಮಿಳ್ನಾಡು ಈರೋಡ್ನ ಸತ್ಯಮಂಗಳ ಎಂಬಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಡಿಸಿಐಬಿ ಮತ್ತು ಉಪ್ಪಿನಂಗಡಿ ಠಾಣಾ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. ಆರೋಪಿ ಅಲ್ಲಿಯೂ ಫೈನಾನ್ಸ್ ನಡೆಸುತ್ತಿದ್ದ ಎನ್ನಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನಿದರ್ೇಶನದಂತೆ ಕಾಯರ್ಾಚರಣೆ ನಡೆಸಿದ್ದು ಡಿಸಿಐಬಿ ಪೊಲೀಸ್ ನಿರೀಕ್ಷಕ ಸವಿತ್ರ ತೇಜ್, ಉಪ್ಪಿನಂಗಡಿ ಗ್ರಾಮಾಂತರ ನಿರೀಕ್ಷಕ ಸುರೇಶ್ ಕುಮಾರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.


