ಬಂಟ್ವಾಳ: ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಗೆ ಮರುಜೀವ ತುಂಬಿ ಚೈತನ್ಯ ನೀಡುವ ಕೆಲಸವನ್ನು ಮಾಡಿದ ಟುಡೇ ಪೌಂಡೇಶನ್ ಸಂಸ್ಥೆಗೆ ಅಭಿನಂದನೆ ಎಂದು ಮಂಗಳೂರು ತಾ.ಪಂ.ಅದ್ಯಕ್ಷ ಮಹಮ್ಮದ್ ಮೋನು ಹೇಳಿದರು. ಅವರು ದ.ಕ.ಜಿಲ್ಲಾ ಪಂ.ಹಿರಿಯ ಪ್ರಾಥಮಿಕ ಶಾಲೆ ಹಾಗೂ ಟುಡೇ ಪೌಂಡೇಶನ್ ಪರಂಗಿಪೇಟೆ ಇವರ ವತಿಯಿಂದ ನಡೆದ ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಗಿ ಮಾತನಾಡಿದರು.2

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟುಡೇ ಪೌಂಡೇಶನ್ ಅಧ್ಯಕ್ಷ ಉಮ್ಮರ್ ಫಾರೂಕ್ ಸರಕಾರಿ ಶಾಲೆಗಳನ್ನು ಉಳಿಸುವ ಮತ್ತ ಬೆಳೆಸುವ ಮನಸ್ಸು ಸಂಘ ಸಂಸ್ಥೆಗಳಲ್ಲಿ ಮೂಡಿದಾಗ ಯಶಸ್ವಿಯಾಗಿ ಮನ್ನಡೆಯಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಪುದು ಮಾಪ್ಲ ಶಾಲೆಯೇ ಸಾಕ್ಷಿಯಾಗಿದೆ, ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು ಟುಡೇ ಪೌಂಡೇಶನ್ ದತ್ತು ಸ್ವೀಕರಿಸಿ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.1

ವೇದಿಕೆಯಲ್ಲಿ ಕೆ.ಡಿ.ಪಿ ಸದಸ್ಯ ಪದ್ಮನಾಭ ನರಿಂಗಾನ, ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಶೀರ್ ಪೆರಿಮಾರ್,ಪುದು ಗ್ರಾಪಂ.ಸದಸ್ಯ ಮಹಮ್ಮದ್ ಭಾವ,ಉದ್ಯಮಿ ಯೂಸುಫ್ ಅಲಂಕಾರು, ಕೆ.ವಿ.ಜಿ.ಬ್ಯಾಂಕ್ ಮ್ಯಾನೇಜರ್ ಗೀತಾ, ಹಿರಿಯರಾಧ ಖಾದರ್, ಟುಡೇ ಪೌಂಡೇಶನ್‍ನ ಸದಸ್ಯರಾದ ಅಬುಬಕ್ಕರ್, ಮಜೀದ್, ಬದ್ರುನ್ನೀಸಾ, ಸಮೀಮಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ನಾಶೀರ್ ಸಲೀಂ ಕುಂಪಣಮಜಲು ಮತ್ತಿರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶಕುಂತಳಾ ಎಸ್.ಉಳ್ಳಾಲ್ ಸ್ವಾಗತಿಸಿ, ಸಿಂಥಿಯಾ ವಂದಿಸಿದರು. ಸುನೀತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರನನು ಮತ್ತುಟುಡೇ ಪೌಂಡೇಶನ್ ಅಧ್ಯಕ್ಷ ರನ್ನು ಗೌರವಿಸಲಾಯಿತು. ಬಳಿಕ ಚಿನ್ನರ ಮನೆಯ ಮಕ್ಕಳ ಮತ್ತು ವಿದ್ಯಾರ್ಥಿಗಳಿಂದ ವಿವಿಧ ವಿನೋಧಾವಳಿಗಳು ನಡೆಯಿತು.

By Suddi9

Leave a Reply

Your email address will not be published. Required fields are marked *