ಬೆಳಗಾವಿ: ವಿಜಯಪುರದಲ್ಲಿ ನಡೆದ ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಖಂಡಿಸಿ ಡಾ. ಬಾಬಾಸಾಹೇಬ ಯುವ ಮಂಚ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಕಾಮುಕರು ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿರುವುದು ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡಿದೆ. ಈ ದುಷ್ಕೃತ್ಯ ಎಸಗಿದ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆ ವಿಸ್ತರಿಸುತ್ತದೆ ಎಂದು ಮುಖ್ಯಮಂತ್ರಿಗೆ ಬರೆದ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಲ್ಲಪ್ಪ ರಾಮಚನ್ನವರ, ಗಜಾನನ ದೇವರಮನಿ, ಸಿದ್ರಾಯಿ ಮೇತ್ರಿ, ರವಿ ಬಸ್ತವಾಡಕರ, ಸಂತೋಷ ಕಾಂಬಳೆ, ಶೇಖರ ತಳವಾರ, ಸಂತೋಷ ಹಲಗೇಕರ, ಶಂಕರ ಕಾಂಬಳೆ, ಸಚಿನ್ ರಾಯಗೋಳ, ಸಾಗರ ಚೌಗುಲೆ, ಮನೋಜ ಹಿತ್ತಲಮನಿ, ದಯಾನಂದ ಕಾವಲದಾರ, ಪ್ರವೀಣ ಘರಾಣಿ ಮತ್ತಿತರರಿದ್ದರು.

