ಬಿ.ಸಿ.ರೋಡ್: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವಾದ ಹಿನ್ನೆಲೆಯಲ್ಲಿ ಇಂದು ಬಿ.ಸಿ.ರೋಡ್ ನಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸ ಮರವಣಿಗೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ದೇಶದ ಭವಿಷ್ಯವನ್ನು ನಿರ್ಮಿಸುವ ಮೋದಿಜಿಯವರ ಕನಸಿಗೆ ದೇಶದ ಜನರು ಸಹಕಾರ ನೀಡಿದ್ದಾರೆ. ಈ ಗೆಲುವು ಮುಂಬರುವ ಕರ್ನಾಟ ಚುನಾವಣೆಗೆ ಮುನ್ನುಡಿ ಬರೆಯಲಿದೆ ಎಂದರು.
ಮೆರವಣಿಗೆಯಲ್ಲಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ರಾಮ್ ದಾಸ ಬಂಟ್ವಾಳ, ಉದಯ ಕುಮಾರ್, ರಮನಾಥ ರಾಯಿ, ಪ್ರಕಾಶ್ ಅಂಚನ್ ದಿನೇಶ್ ಭಂಡಾರಿ, ಪುಷ್ಪರಾಜ್ ಚೌಟ, ಚರಣ್ ಜುಮಾದಿಗುಡ್ಡೆ, ಸುರೇಶ್ ಕೋಟ್ಯಾನ್, ಪೃತ್ವಿರಾಜ್, ಪ್ರದೀಪ್ ಅಜ್ಜಿಬೆಟ್ಟು, ಗಣೇಶ್ ರೈ ಮಾಣಿ, ಪವನ್ ಕುಮಾರ್, ಸಂತೋಷ್ ಕುಮಾರ್ ರಾಯಿ, ಬಾಲಕೃಷ್ಣ ಚೆರ್ಕಳ, ನಂದ ರೈ, ಅಭಿಷೇಕ್ ರೈ, ಶಶಿಕಾಂತ್ ಶೆಟ್ಟಿ, ಹರೀಶ್ ಆಚಾರ್ಯ, ಹರೀಶ್ ಶೆಟ್ಟಿ ಪಡು, ಮಚ್ಚೇಂದ್ರ ಸಾಲಿಯಾನ್, ಲೋಹಿತ್ ಪನೋಲಿಬೈಲು ಮತ್ತಿತರರು ಭಾಗವಹಿಸಿದ್ದರು.



