ವಿಟ್ಲ:ಇಲ್ಲಿನ ವಿಟ್ಲ ಮಾದರಿ ಶಾಲೆಯಲ್ಲಿ 2017-18ನೇ ಸಾಲಿನ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿಭಾ ಪುರಸ್ಕಾರ ವಿಟ್ಲ ಪಟ್ಟಣ ಪಂಚಾಯತ್‍ನ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ರಾಮದಾಸ್ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.3

ಈ ಸಂದರ್ಭದಲ್ಲಿ ವಿಟ್ಲ ಯೋಗೀಶ್ವರ ಮಠದ ಶ್ರೀ ರಾಜಗುರು ಶೃದ್ಧಾನಾಥಜೀಮಹಾರಾಜ, ಲಯನ್ಸ್ ಕ್ಲಬ್ ಅಧ್ಯಕ್ಷೆ  ವಿನ್ನಿ ಮಸ್ಕರೇನಸ್, ಕೌನ್ಸಿಲರ್  ಜಯಂತ್ ವಿಟ್ಲ, ಉದ್ಯಮಿಗಳಾದ  ಹರೀಶ್ ನಾಯಕ್, ವಿಟ್ಲ ಜೇ.ಸಿ.ಐ. ಅಧ್ಯಕ್ಷರಾದ ಶ್ರೀ ಸೋಮಶೇಖರ್ ಹೆಚ್, ಸಮನ್ವಯಾಧಿಕಾರಿಗಳಾದ  ರಾಜೇಶ್, ಬಿ.ಆರ್.ಪಿ. ಪ್ರದೀಪ್ ,ಸಿ.ಆರ್.ಪಿ.  ರವಿಪ್ರಸಾದ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಜಗನ್ನಾಥ ಕಾಸರಗೋಡು ಉಪಸ್ಥಿತರಿದ್ದರು. ವಿವಿಧ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಲ್ಲಾ ಶಿಕ್ಷಕವೃಂದದವರು ಸಹಕರಿಸಿದರು. ಮುಖ್ಯಗುರುಗಳಾದ ಶ್ರೀ ವಿಶ್ವನಾಥ ಬಿ. ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿಜಯಂತಿ ವಂದಿಸಿದರು. ಸಹಶಿಕ್ಷಕ ಶ್ರೀ ದಯಾನಂದ ಎನ್. ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *