ಮಂಗಳೂರು: ಕುಂಜತ್ತಬೈಲ್ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಇತ್ತೀಚೆಗೆ ನಡೆಯಿತು.ಮಕ್ಕಳ ದಿನಾಚರಣೆ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಅತಿಥಿ ಗಳು ಬಹುಮಾನ ವಿತರಿಸಿದರು.

ಅಂಗನವಾಡಿಗೆ ಬೇಕಾದ 30 ಪ್ಲಾಸ್ಟಿಕ್ ಕುರ್ಚಿಯನ್ನು ಕುಂಜತ್ತಬೈಲ್ ಸಮುದಾಯ ಸಂಘದ ವತಿಯಿಂದ ಕೊಡುಗೆಯಾಗಿ ನೀಡಿದರು.ಕುಂಜತ್ತಬೈಲ್ ಸಮುದಾಯ ಸಂಘದ ಅಧ್ಯಕ್ಷ ಶೇಖರ್ ಸುವರ್ಣ, ಸಮಾಜ ಸೇವಕಿ ಸ್ರೀ ಜಾಗೃತಿ ಸಮಿತಿ ಕಾರ್ಯಕರ್ತೆ ಸಂಶಾದ್ ಮತ್ತು ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದರು.
