ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ). ಇದರ ಕ್ರಿಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆ – 2017 ಉದ್ಘಾಟನಾ ಸಮಾರಂಭ ಎಸ್.ವಿ.ಎಸ್.ದೇವಳದ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪುರಸಭೆಯ ಅಧ್ಯಕ್ಷ ರಾಮಕೃಷ್ಣ ಆಳ್ವ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರಕಾರಿ ನೌಕರರು ಕೆಲಸದ ಒತ್ತಡದ ನಡುವೆಯೂ ಸಾಮಾಜಿಕ ಮನೋಭಾವನೆಯನ್ನು ಮೈಗೂಡಿಸಿಕೊಂಡು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ಭಾಗವಹಿಸುವುದು ಅಭಿನಂದನೀಯ ಎಂದರು.
ಕ್ರೀಡಾಕೂಟದ ದ್ವಜಾರೋಹಣವನ್ನು ನೆರವೇರಿಸಿದ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ ಸರಕಾರಿ ನೌಕರರು ಮಾನಿಸಿಕವಾಗಿ ಮತ್ತು ದೈಹಿಕವಾಗಿ ಸದೃಡರಾಗಲು ಕ್ರೀಡೆ ಅಗತ್ಯ ಎಂದರು. ಮುಖ್ಯ ಅತಿಥಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಮಾತನಾಡಿ ಧನತ್ಮಾಕ, ಸಕರಾತ್ಮಕ ದೋರಣೆ ನಿಜಕ್ಕೂ ಇತರರಿಗೆ ಪ್ರೇರಣೆ. ಕ್ರೀಡೆಯಲ್ಲಿ ಭಾಗವಹಿಸುವಿಕೆಯ ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ಗೆಲುವು ಸಿಗಲು ಸಹಕಾರಿಯಾಗಿಸುತ್ತದೆ ಎಂದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮನಾಥ ರೈ ಮೇರಾವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುರಸಭಾ ಸದಸ್ಯ ಗೋವಿಂದ ಪ್ರಭು, ಕ್ಯಾಥೊಲಿಕ್ ಸಭಾದ ಅಧ್ಯಕ್ಷ ಸ್ಟ್ಯಾನಿ ಲೋಬೋ, ಪಿಡಬ್ಲ್ಯು ಡಿ ಗುತ್ತಿಗೆದಾರ ಧೀರಜ್ ಟಿ ನಾಯಕ್, ಕ್ರೀಡಾ ಸಂಘಟಕರಾದ ಅಖಿಲ್ ಶೆಟ್ಟಿ ಮತ್ತು ನವೀನ್ ಪಿಎಸ್, ಎಸ್.ವಿ.ಎಸ್.ದೇವಳ ಶಾಲೆಯ ಮುಖ್ಯೋಪಾದ್ಯಾಯನಿ ನಂದಿನಿ ಬಾಯಿ, ಪ್ರೌಡ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೋಯೆಲ್ ಲೋಬೋ, ಗ್ರಾಮಕರಣೀಕರ ಸಂಘದ ಅಧ್ಯಕ್ಷ ತೌಫೀಕ್, ಬಡ್ತಿ ಹೊಂದಿದ ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್, ಎಮ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಸಂತೋಷ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರದೀಪ್, ಶಿಕ್ಷಣ ಸಂಯೋಜಕರಾದ ಪ್ರಕಾಶ್ ಮತ್ತು ಶ್ರೀಕಾಂತ್, ಜಿಲ್ಲಾ ನೌಕರರ ಸಂಘದ ಪಧಾಧಿಕಾರಿ ಜಯರಾಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ರಮೇಶ್ ನಾಯಕ್ ರಾಯಿ ಸ್ವಾಗತಿಸಿ, ಖಜಾಂಚಿ ಜೆ ಜನಾರ್ಧನ ವಂದಿಸಿದರು. ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.
