ಬಂಟ್ವಾಳ: ದಕ್ಷಿಣ ಕನ್ನ ಜಿಲ್ಲಾ ಪೊಲೀಸ್ ಇದರ ವತಿಯಿಂದ ಪುದು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ ಮಾದಕ ದ್ರವ್ಯ ಸೇವನೆಯ ವಿರುದ್ದ ಜಾಗೃತಿ ಕಾರ್ಯಕ್ರಮ ಬುಧವಾರ ನಡೆಯಿತು.ಜಿಲ್ಲಾ ಎನ್‍ಡಿಪಿಎಸ್ ನಿರೀಕ್ಷಕ ತಾರಾನಾಥ್ ಅವರು ಮಾದಕ ದ್ಯವ ಸೇವನೆ ಹಾಗು ಮಾರಾಟದಿಂದಾಗುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.BTW_NOV22_1

ಗಾಂಜಾ ಬೆಳೆದರೆ ಆರೋಪಿಗಳಿಗೆ 6 ತಿಂಗಳೂ ಶಿಕ್ಷೆ ಹಾಗೂ 10 ಸಾವಿರ ರುಪಾಯಿ ದಂಡ ವಿಧಿಸಲಾಗುತ್ತದೆ. ವಾಣಿಜ್ಯ ಉದ್ದೇಶಕ್ಕಾಗಿ ಬೆಳೆದರೆ 10 ವರ್ಷ ಜೈಲು ಸಜೆ ಹಾಗೂ 10 ಲಕ್ಷ ರುಪಾಯಿ ದಂಡ ವಿಧಿಸಲಾಗುತ್ತದೆ. ಮಾದಕ ದ್ರವ್ಯಗಳ ಸೇವನೆಗೆ 20 ಸಾವಿರ ದಂಡ ಹಾಗೂ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ಒಂದು ಗ್ರಾಂ ಗಾಂಜಾವನ್ನು ಕೂಡ ಯಾರೂ ಇಟ್ಟುಕೊಳ್ಳುವಂತಿಲ್ಲ ಎಂದು ತಿಳಿಸಿದರು. ಗಾಂಜಾ ಮೊದಲಾದ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ವ್ಯಕ್ತಿ ಉತ್ತಮ ಶಿಕ್ಷಣ ಪಡೆದಾಗ ಇಂತಹ ದುಶ್ಚಟಗಳಿಂದ ದೂರವಿರಲು ಸಾಧ್ಯವಿದೆ. ಪೋಷಕರು ಕೂಡ ಮಕ್ಕಳ ನಡವಳಿಕೆಯ ಮೇಲೆ ನಿಗಾ ಇಡಬೇಕು ಎಂದರು. ಬಂಟ್ವಾಳ ಗ್ರಾಮಾಂತರ ಠಾಣ ಎಸೈ ಪ್ರಸನ್ನ, ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯ ರಮ್ಲಾನ್ ಮಾರಿಪಳ್ಳ, ಮುಖ್ಯ ಶಿಕ್ಷಕಿ ಶಶಿಮಂಗಳ ಪ್ರಮುಖರಾದ ಮನೋರಮಾ, ರಫೀಕ್, ಹುಸೈನ್, ಝುಬೈರ್, ಸಲಾಂ ಮಲ್ಲಿ ಮತ್ತಿತತರರು ಹಾಜರಿದ್ದರು.
ಶಿಕ್ಷಕ ಬಿ.ಎಂ.ತುಂಬೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *