ವಿಟ್ಲ: “ಈ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು. ಅದಕ್ಕೆ ಅಗತ್ಯವಾದ ತರಬೇತಿಯನ್ನು ನೀಡಲು ನಾವು ಸದಾ ಸಿದ್ಧ” ಎಂದು ದುರ್ಗಾ ಜಿಮ್ನಾಶಿಯಂ ಸ್ಥಾಪಕರಾದ ರಾಷ್ಟ್ರೀಯ ವೆಯ್ಟ್ ಲಿಫ್ಟಿಂಗ್ , ಪವರ್ ಲಿಫ್ಟಿಂಗ್, ದೇಹದಾಢ್ರ್ಯ ತರಬೇತುದಾರ ಕಲ್ಲಾಜೆ ವಸಂತ್ ರೈ ಹೇಳಿದರು.
ಅವರು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಶಾಲಾ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಸಂಚಾಲಕ ಪ್ರಹ್ಲಾದ್ .ಜೆ. ಶೆಟ್ಟಿ. ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಉತ್ತಮ ಅಭ್ಯಾಸ ಮಾಡಿದವರಿಗೆ ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ ಎಂದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ನಾರಾಯಣ ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೆ.ಬಾಲಕೃಷ್ಣ ಆಳ್ವ , ಆಡಳಿತಾಧಿಕಾರಿ ಸಿ.ಶ್ರೀಧರ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಗ್ರೇಸ್ ಪಿ ಸಲ್ಡಾನ ಹಾಗೂ ಶಿಕ್ಷಕ-ರಕ್ಷಕ ಸಂಘ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ , ಕ್ರೀಡಾಜ್ಯೋತಿಯ ಆಗಮನ , ಪ್ರತಿಜ್ಞಾ ಸ್ವೀಕಾರ ವಿಧಿ ನಡೆಸಲಾಯಿತು.
ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮೀ.ವಿ.ಶೆಟ್ಟಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ವಿಶಾಲಾಕ್ಷಿ ಎಚ್.ಆಳ್ವ ವಂದಿಸಿದರು. ಶಿಕ್ಷಕಿಯರಾದ ಸುಧಾ ಎನ್.ರಾವ್ ಮತ್ತು ಶುಭಾ.ಕೆ. ಕಾರ್ಯಕ್ರಮ ನಿರ್ವಹಿಸಿದರು.
