ಬಂಟ್ವಾಳ : ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆ ತಾ.ಪಂ. ನ ಎಸ್ ಜಿ.ಅರ್ ಎಸ್ ವೈ ಸಭಾಂಗಣದಲ್ಲಿ ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅದ್ಯಕ್ಷತೆಯಲ್ಲಿ ನಡೆಯಿತು.
ಬಳಿಕಮಾತನಾಡಿದ ಅವರು ತಾ.ಮಟ್ಟದ ಸಭೆಗಳಲ್ಲಿ ಎಲ್ಲಾ ಅಧಿಕಾರಿಗಳ ಭಾಗವಹಿಸುವಿಕೆ ಕಡ್ಡಾಯವಾಗಬೇಕು ಎಂದರು ವಿವಿಧ ಇಲಾಖೆ ಗಳ ಪ್ರಗತಿಯ ಬಗ್ಗೆ ಅಧಿಕಾರಿಗಳು ವಿವರ ನೀಡಿದರು. ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ. ಸ್ಥಾಯಿ ಸಮಿತಿ ಅದ್ಯಕ್ಷೆ ಧನಲಕ್ಷೀ ಸಿ ಬಂಗೇರ. ತಾ.ಪಂ.ಕಾರ್ಯನಿರ್ವಾಣಾಧಿಕಾರಿ ಸಿಪ್ರಿಂಯಾನ್ ಮಿರಾಂಡ ಉಪಸ್ಥಿತರಿದ್ದರು.
