ಕೈಕಂಬ : ಮಂಗಳೂರು-ಮೂಡಬಿದ್ರೆ ಹೆದ್ದಾರಿ 169ರಲ್ಲಿ ಗುರುಪುರಕ್ಕೆ ಹತ್ತಿರ ಶನಿವಾರ ಬೆಳಿಗ್ಗೆ ಸಂಭವಿಸಿದ ಎರಡು ಪ್ರತ್ಯೇಕ ಬಸ್, ಟಿಪ್ಪರ್ ಡಿಕ್ಕಿ ಅಪಘಾತದಲ್ಲಿ ಒಬ್ಬ ಗಂಭೀರ ಗಾಯಗೊಂಡಿದ್ದು, ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

4vp tippar
ಗುರುಪುರ ಅಣೆಬಳಿಗೆ ಹತ್ತಿರದಲ್ಲಿ ಬೆಳಿಗ್ಗೆ 22 ಕ್ರಮ ಸಂಖ್ಯೆಯ(ಬಜಪೆ) ಖಾಸಗಿ ಬಸ್ ಮತ್ತು ಇನ್ನೊಂದು ಖಾಸಗಿ ಬಸ್ ಡಿಕ್ಕಿಯಾಗಿದ್ದು, ಬಸ್ಸಿನ ಗಾಜು ಒಡೆದು ಹೋಗಿದೆ. ಬಸ್ಸಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬಳಿಕ ಎರಡೂ ಬಸ್ಸಿನವರು ಪ್ರಕರಣವನ್ನು ರಾಜಿಯಲ್ಲಿ ಮುಗಿಸಿದ್ದಾರೆ.

4-1
ಪೊಳಲಿ ದ್ವಾರದ ಬಳಿ ನಿಂತಿದ್ದ `22′ ಸಂಖ್ಯೆ ಮತ್ತೊಂದು ಖಾಸಗಿ ಬಸ್ಸಿಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಟಿಪ್ಪರ್ ಟಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಟಿಪ್ಪರಿನ ಕಂಡಕ್ಟರ್ ಗಂಭೀರ ಗಾಯವಾಗಿದ್ದು, ಗುರುಪುರ ಸೇವಾ ಬ್ರಿಗೇಡ್ ಆ್ಯಂಬುಲೆನ್ಸಿನಲ್ಲಿ ಮಂಗಳೂರಿನ ಕೊಲೋಸೊ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಬಜಪೆ ಪೊಲೀಸರು ತಿಳಿಸಿದರು.

By suddi9

Leave a Reply

Your email address will not be published. Required fields are marked *