ಕೈಕಂಬ:ಸ್ಕಂದಶ್ರೀ ಸೇವಾ ಸಮಿತಿ(ರಿ) ಸ್ಕಂದ ನಗರ ಕಂದಾವರ, ಕೈಕಂಬ ಇದರ ವತಿಯಿಂದ 8ನೇ ವರ್ಷದ ತುಡರ ಪರ್ಬವನ್ನು ಸ್ಕಂದ ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ) ಮಂಗಳೂರು ಇದರ ಕಂದಾವರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಶಾಲಿನಿ ಶಶಿಕಾಂತ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ, ಕೈಕಂಬ ಇದರ ಪ್ರಾಂಶುಪಾಲರು ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಮಂಗಳೂರು. ಶೀ ರಾಮ ಶಾಖೆಯ ಶಿಕ್ಷಕರಾದ ಮಹೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ದೀಪಾವಳಿಯ ಮತ್ತು ತುಡರ ಪರ್ಬದ ಆಚರಣೆಯ ಮಹತ್ವವನ್ನು ತಿಳಿಸಿದರು.
ಅತಿಥಿಗಳಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಗ್ರಾಮಾಂತರ ವಲಯದ ಶಿಕ್ಷಕರಾದ ಭರತ್ ಜೈನ್, ಉಮೇಶ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ (ರಿ) ಮಂಗಳೂರು ಇದರ ಕಂದಾವರ ಒಕ್ಕೂಟದ ಅಧ್ಯಕ್ಷರಾದ ಸತೀಶ್ ಶೆಟ್ಟಿ ಕಂದಾವರ, ಹಿರಿಯರಾದ ರಾಮ ಪೂಜಾರಿ, ಸ್ಥಳೀಯರಾದ ಬೆರ್ನಾಡ್ ಸಿಕ್ವೇರಾ, ಸ್ಕಂದ ಶ್ರೀ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ಶೆಖರ್ ಶೆಟ್ಟಿಗಾರ್, ಸ್ಕಂದಶ್ರೀ ಸೇವಾ ಸಮಿತಿಯ ಪದಾಧಿಕಾರಿಗಳು ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಭರತ್ ಎಸ್ ಕರ್ಕೇರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶೇಖರ್ ಶೆಟ್ಟಿಗಾರ್ ವಂದಿಸಿದರು. ನಂತರ ವಿಶೇಷವಾಗಿ ದೀಪಗಳನ್ನು ಹಚ್ಚಿ ದೀಪಾವಳಿಯ ವಿಶೇಷ ತಿಂಡಿ ತಿನಿಸುಗಳನ್ನು ಸವಿಯುವ ಮೂಲಕ ತುಡರ ಪರ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
