ಪೊಳಲಿ :ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧರ ಕಾರ್ಯಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು ದೇವಳಕ್ಕೆ ಕರ್ನಾಟಕ ಸರಕಾರದ ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪಮಾನಪ್ಪ ಲಮಾಣಿಯವರು ಭಾನುವಾರ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಅವರೊಂದಿಗೆ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವ ಕುಮಾರ್ ಪಾಟೀಲ್ ಹಾಗೂ ಪ್ರವೀಣ ಕುಮಾರ ಸಾಲಿಮಠ ಇದ್ದರು.29vp mujaray

 

29 vp mujaray
ದೇವಳದ ವತಿಯಿಂದ ಪ್ರಸಾದ ನೀಡಿ ಗೌರವಿಸಿದರು. ದೇವಳದ ತಂತ್ರಿ ಸುಬ್ರಹ್ಮಣ್ಯ, ಪವಿತ್ರಪಾಣಿ ಮಾಧವ ಭಟ್, ಪರಮೇಶ್ವರ ಭಟ್ ದೇವಳದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಸಚಿವ ಬಿ. ರಮಾನಾಥ ರೈ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರ ಹಾಗೂ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ತಾರಾನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವು ಮತ್ತು ಮಾಜಿ ಮುಜರಾಯಿ ಸಚಿವ ನಾಗರಾಜ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *