ಬಂಟ್ವಾಳ: ಸಿದ್ದಕಟ್ಟೆ ರಾಗ ತರಂಗಿಣಿ ಭಜನಾ ಒಕ್ಕೂಟದ ವತಿಯಿಂದ ಸಿದ್ಧಕಟ್ಟೆಯಲ್ಲಿ ಭಜನಾ ಜಾಥ ಅ. 29ರಂದು  ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ನಡೆಯಲಿದೆ ಎಂದು ಭಜನಾ ಒಕ್ಕೂಟದ ಅಧ್ಯಕ್ಷ ರವೀಂದ್ರ ಪೂಜಾರಿ ಬದನಡಿ ತಿಳಿಸಿದ್ದಾರೆ. ಶುಕ್ರವಾರ ಬಿ.ಸಿ. ರೋಡ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಹಾಗೂ ಸಿದ್ಧಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷರಾದ ಗೋಪಾಲ ಬಂಗೇರ ಭಜನಾ ಜಾಥಕ್ಕೆ ಚಾಲನೆ ನೀಡಲಿದ್ದಾರೆ.
ಭಜನಾ ಜಾಥದಲ್ಲಿ ಜಿಲ್ಲೆಯ ಸುಮಾರು 100 ಭಜನಾ ಮಂಡಳಿಗಳು ಭಾಗವಹಿಸಲಿವೆ. ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಮಂದಿರದಿಂದ 1.50ಕಿ.ಮೀ. ಜಾಥಾ ನಡೆದು ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನದಲ್ಲಿ ಸಂಪನ್ನಗೊಂಡು ಭಜನಾ ಕಮ್ಮಟ ನಡೆಯಲಿದೆ.IMG-20171027-WA0110

deepa

ರಾಗ ತರಂಗಿಣಿ ಭಜನಾ ಒಕ್ಕೂಟ ಅಧ್ಯಕ್ಷ ರವೀಂದ್ರ ಪೂಜಾರಿ ಬದನಡಿ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಅಕ್ಷಯ ಗೋಖಲೆ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಸಂಘಟನಾ ಕಾರ್ಯದರ್ಶಿ ದಿನೇಶ್‍ಸುವರ್ಣ ರಾಯಿ ವಿವರ ನೀಡಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಫೇಸ್‍ಬುಕ್‍ನಲ್ಲಿ ಅವಮಾನಗೈದವನನ್ನು ಬಂಧಿಸುವಂತೆ ಒತ್ತಾಯ ಮಾಡಿ ಸಿದ್ಧಕಟ್ಟೆ ಸುತ್ತಮುತ್ತಲಿನ 20 ಭಜನಾ ಮಂಡಳಿಗಳ ಸಹಯೋಗದಿಂದ 5ಕಿ.ಮೀ.ನಷ್ಟು ದೂರ ಬೃಹತ್ ಭಜನಾ ಜಾಥ ನಡೆಸಿದ್ದು, ಆ ದಿನ ಭಜಕರೆಲ್ಲರು ನಿರ್ಣಯ ಕೈಗೊಂಡರು.

ನಮ್ಮ ಅನಾದಿ ಕಾಲದ ಸಂಸ್ಕøತಿ, ಸಂಸ್ಕಾರ, ಪರಂಪರೆ ಉಳಿಯಬೇಕು ಅದಕ್ಕೆ ಎಂದಿಗೂ ಕೇಡಾಗಬಾರದು, ಸಂಸ್ಕಾರ, ಸಂಸ್ಕøತಿ ಮತ್ತು ಪರಂಪರೆಗಳಲ್ಲಿ ವಿಶ್ವದಲ್ಲೇ ಉತ್ತುಂಗ ಶಿಖರದಲ್ಲಿರುವ ಹಿಂದೂ ಧರ್ಮಕ್ಕೆ ಮತ್ತು ದೇವಾನುದೇವತೆಗಳಿಗೆ, ತುಳುನಾಡಿನ ಭೂತಾರಧನೆಗೆ ಎಲ್ಲಿ ಅಪಚಾರ, ಅವಮಾನ, ವಿಡಂಬಣೆ ಮಾಡುತ್ತಾರೋ ಅಂತಹ ಸಂದರ್ಭಗಳಲ್ಲಿ ಪ್ರತಿಭಟಿಸಿ ನಮ್ಮ ಅಂತರಂಗವನ್ನು ತಿಳಿಸಲು, ಧರ್ಮಕ್ಕೆ ಚ್ಯುತಿಬಾರದಂತೆ ನೋಡಿಕೊಳ್ಳುವುದು ಭಜಕರ ಕರ್ತವ್ಯ ಎಂದರಿತ ಭಜಕರು ಒಂದಾಗಿ ಅಂದು ಕಟ್ಟಿದ ಸಂಘಟನೆಯೇ ರಾಗತರಂಗಿಣಿ ಭಜನಾ ಒಕ್ಕೂಟ.

ಉದ್ದೇಶ:
ಎಳವೆಯಿಂದಲೇ ಮಕ್ಕಳಿಗೆ ಅತ್ಯುತ್ತಮ ಸಂಸ್ಕಾರ ಸಿಗುವ ಏಕೈಕ ಶ್ರದಾ ್ಧಕೇಂದ್ರ ಭಜನಾ ಮಂಡಳಿ. ಭಕ್ತಿಯಿಂದ ಜಗದೀಶ್ವರನನ್ನು ನೆನೆಯುವುದೇ ಭಜನೆ. ಭಜನೆಗೆ ಅಂತಹ ಶಕ್ತಿ ಇದೆ. ಭಜನಾ ಮಂಡಳಿಗಳಿಗೆ ಸರಕಾರದಿಂದ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ, ಮಂಡಳಿಗೆ ಬೇಕಾಗುವ ಪರಿಕರಗಳನ್ನು ಒದಗಿಸಲು ಪ್ರಯತ್ನ ಮಾಡುವ ನಿಟ್ಟಿನಲ್ಲಿ ಹಾಗೂ ಭಜಕರಿಗೆ ಆಕಸ್ಮಿಕ ತೊಂದರೆಯಾದಾಗ ಸಹಾಯಕ್ಕಾಗಿ ಆರೋಗ್ಯ ತುರ್ತುನಿಧಿ ಯೋಜನೆಯ ಸಂಕಲ್ಪ ಹಾಗೂ ಭಜನೆಯ ಮೂಲಕ ಧರ್ಮಜಾಗೃತಿ ಮೂಡಿಸುವುದು ಹೀಗೆ ಹಲವಾರು ಉದ್ದೇಶಗಳನ್ನು ಒಕ್ಕೂಟ ಇರಿಸಿ ಕೊಂಡಿದೆ. ಒಕ್ಕೂಟ ರಚನೆಯಾದ ಬಳಿಕ ಇದು ಪ್ರಪ್ರಥಮ ಆಯೋಜನೆಗೊಂಡ ಕಾರ್ಯಕ್ರಮವಾಗಿದೆ
ರಾಗ ತರಂಗಿಣಿ ಕಾರ್ಯದರ್ಶಿ ಸಂತೋಷ್ ಕೊಯಿಲ, ನಿತೇಶ್ ಶೆಟ್ಟಿ ಬದನಡಿ, ಉಪಾಧ್ಯಕ್ಷ ಶಶಿಧರ್ ಶೆಟ್ಟಿ ಹಕ್ಕೇರಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *