ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ದಾರದ ಪ್ರಕ್ರೀಯೆ ನಡೆಯುತ್ತಿದ್ದು. ಇಲ್ಲಿಯ ಕ್ಷೇತ್ರಪಾಲನ ವಿಗ್ರಹಕ್ಕೆ ಮರದ ಅಗತ್ಯವಿದ್ದು ಇದನ್ನು ಮೂಡಬಿದ್ರೆ ಅಲಂಗಾರು ವಾಸುದೇವ ಭಟ್ ಅವರ ಜಾಗದಲ್ಲಿದ್ದ ಹಲಸಿನ ಮರ ಕಡಿಯಲು ಮುಹೂರ್ತ ಶುಕ್ರವಾರ ನೆರವೇರಿತು.
ಪೊಳಲಿ ದೇವಳದಲ್ಲಿ ಪ್ರಾರ್ಥಿಸಿ ಮೂಡಬಿದ್ರೆ ಅಲಂಗಾರು ಮಹಲಿಂಂಗೇಶ್ವರ ದೇವಳದಲ್ಲಿ ಪೂಜೆ ನೆರವೇರಿಸಿ ಮರದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಮರಕ್ಕೆ ಮಹೂರ್ತ ಮಾಡಲಾಯಿತು. ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್, ಶ್ರೀ ಕ್ಷೇತ್ರ ಪೊಳಲಿಯ ತಂತ್ರಿಗಳಾದ ಸುಬ್ರಹ್ಮಣ್ಯ ಹಾಗೂ ವೆಂಕಟೇಶ್ ತಂತ್ರಿ ಪೊಳಲಿ ದೇವಳದ ಪವಿತ್ರಪಾಣಿ ಮಾಧವ ಭಟ್, ಚಂದ್ರಶೇಖರ ಭಟ್ , ವಿಷ್ಣುಮೂರ್ತಿ ನಟ್ಟೋಜ, ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮುಂಜೆಗುತ್ತು, ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಕ್ರಷ್ಣ ಕುಮಾರ್ ಪೂಂಜ,ಅರುಣ್ ಆಳ್ವ ಉಳಿಪಾಡಿಗುತ್ತು, ಕ್ರಷ್ಣರಾಜ್ ಮಾರ್ಲ,ಸುಬ್ರಾಯ ಕಾರಂತ, ಗಿರಿಧರ ಶೆಟ್ಟಿ, ಸಂಪತ್ ಕುಮಾರ್, ವೆಂಕಟೇಶ್ನಾವಡ, ವಿದ್ಯಾಚರಣ್ ಭಂಡಾರಿ, ಸದಾನಂದ ಕಾಜಿಲ ,ದೀಕ್ಷಿತ್ ಮಳಲಿ,ಪದ್ಮನಾಭ ,ಕುಮಾರ್,ಯಶೋಧರ ಮತ್ತಿತರರು ಇದ್ದರು. ಸುಮಾರು 8ಫೀಟ್ ಅಗಲ 25 ಪೀಟ್ ಎತ್ತರದ ಹಲಸಿನ ಮರದ ಕೆತ್ತನೆಯನ್ನು ಕಲ್ಲಮುಂಡ್ಕೂರು ಶಿಲ್ಪಿಗಳಾದ ನಾರಾಯಣ ಆಚಾರ್ಯ ಹಾಗೂ ಹರೀಶ್ ಆಚಾರ್ಯ ಇವರು ಕ್ಷೇತ್ರಪಾಲನ ಮೂರ್ತಿಯನ್ನು ಮಾಡಲಿದ್ದಾರೆ. ಮರದ ಹಾಗೂ ಮೂರ್ತಿಯ ಎಲ್ಲಾ ಕೆಲಸಗಳ ಸಂಪೂರ್ಣ ಜವಾಬ್ದಾರಿಯನ್ನು ಉದ್ಯಮಿಗಳಾದ ರಾಜೇಶ್ ಪೈ ಅವರು ವಹಿಸಿಕೊಡಿದ್ದಾರೆ.







