ವಿಟ್ಲ ಶಿವಾಜಿ ಮಿತ್ರ ಮಂಡಲ ಶಿವಾಜಿನಗರ ಇದರ ಆಶ್ರಯದಲ್ಲಿ ನಡೆಯುವ 25 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆಯನ್ನು ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಯವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ವಿಟ್ಲ, ಜಯರಾಮ ಬಲ್ಲಾಳ್, ಶಿವಾಜಿ ಮಿತ್ರ ಮಂಡಲದ ಅಧ್ಯಕ್ಷ ಜಯರಾಮ ಕೆ, ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಬಾಬು ಮೂಲ್ಯ, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಎಸ್, ಮೋಹನಂದ ಶೆಟ್ಟಿ, ಚಂದ್ರಶೇಖರ, ನಾರಾಯಣ ನಾಯ್ಕ, ಶೀನ ನಾಯ್ಕ, ಕೃಷ್ಣ ನಾಯ್ಕ, ಗಣೇಶ ನಾಯ್ಕ, ನವೀನ, ಸದಾಶಿವ ಶಿವಾಜಿನಗರ, ಲೋಕನಾಥ ಕೂಜಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು.

