ವಿಟ್ಲ : ಕರ್ನಾಟಕ ಸರಕಾರ ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ಬಂಟ್ವಾಳ ಇದರ ವತಿಯಿಂದ ಪಿಂಗಾರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ವಿಟ್ಲ ಇದರ ಸಹಯೋಗದೊಂದಿಗೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ `ರೈತರಿಗೆ 7 ದಿನಗಳ ಜೇನು ಸಾಕಾಣಿಕೆ ತರಬೇತಿ’ ಕಾರ್ಯಕ್ರಮವು ವಿಟ್ಲ ಪಿಂಗಾರ ತೋಟಗಾರಿಕಾ ಸಭಾ ಭವನದಲ್ಲಿ ಅ.6ರಂದು ರಂದು ಪ್ರಾರಂಭಗೊಂಡಿತು. ಈ ಕಾರ್ಯಕ್ರಮವನ್ನು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ಉದ್ಘಾಟಿಸಿದರು.

jenu ಮುಖ್ಯ ಅತಿಥಿಗಳಾಗಿ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಸಂಘ ವಿಟ್ಲ ಇದರ ಅಧ್ಯಕ್ಷ ರಾಮ್‍ಕಿಶೋರ್, ದ ಕ ಜೇನು ವ್ಯವಸಾಯ ಸಂಘದ ಮಾಜಿ ಅಧ್ಯಕ್ಷ ಶ್ಯಾಂ ಭಟ್, ಉಪಾಧ್ಯಕ್ಷ ಎಂ ಪ್ರಸಾದ್, ಪಟ್ಟಣ ಪಂಚಾಯತ್ ಸದಸ್ಯ ಲೋಕನಾಥ ಶೆಟ್ಟಿ ಕೊಲ್ಯ, ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ ಎಸ್, ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಲಿಂಗಪ್ಪ ಗೌಡ, ಕೃಷ್ಣಪ್ಪ ಪೂಜಾರಿ ಮತ್ತು ನಿರ್ದೇಶಕ ಸದಾನಂದ ಗೌಡ ಸೇರಾಜೆ ಇವರು ಭಾಗವಹಿಸಿದ್ದರು. ತೋಟಗಾರಿಕಾ ಇಲಾಖೆಯ ಬಾಲಕೃಷ್ಣ ಭಟ್ ಕಾರ್ಯಕ್ರಮ ಸಂಯೋಜಿಸಿದರು.

By suddi9

Leave a Reply

Your email address will not be published. Required fields are marked *