ಕೈಕಂಬ:ಅಕ್ಟೋಬರ್ 2ರ ಗಾಂಧಿಜಯಂತಿ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮೂಡುಪೆರಾರ ಎ ಬಜಪೆ ವಲಯದ ಸದಸ್ಯರಿಂದ ಗ್ರಾಮಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪಡುಪೆರಾರ ಗ್ರಾಮ ಪಂಚಾಯತ್ ಸದಸ್ಯರಾದ ಯಶವಂತ ಪೂಜಾರಿ ಉದ್ಘಾಟಿಸಿದರು. ಒಕ್ಕೂಟದ ಅದ್ಯಕ್ಷ ಲೋಕೇಶ್ ಅದ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿಯಾದ ಜನಾರ್ಧನ, ಹಾಗೂ ಪದಾಧಿಕಾರಿಗಳು ಒಕ್ಕೂಟದ ಎಲ್ಲಾ ಸದಸ್ಯರುಗಳು ಭಾಗವಹಿಸಿದರು.

