ಬಂಟ್ವಾಳ:ತಾಲ್ಲೂಕಿನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವಿರುದ್ಧ ನಡೆಯುತ್ತಿರುವ ನಿರಂತರ ಅಪಪ್ರಚಾರ ಮತ್ತು ಸಂಘಟನೆ ಬಲಹೀನಗೊಳಿಸುವ ಹುನ್ನಾರ ವಿರುದ್ಧ ‘ನಮಗೂ ಹೇಳಲಿಕ್ಕಿದೆ’ ಎಂಬ ಘೋಷಣೆಯಡಿ ಇದೇ 15ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಾ ಸಮ್ಮೇಳನ ನಡೆಯಲಿದೆ.
ಇದಕ್ಕಾಗಿ ಇದೇ 6ರಿಂದ 12ರತನಕ ತಾಲ್ಲೂಕಿನ ವಿವಿಧೆಡೆ ಪ್ರಚಾರ ಕಾರ್ಯವನ್ನು ಸಂಘಟನೆ ಹಮ್ಮಿಕೊಂಡಿದೆ. ಇಲ್ಲಿನ ಫರಂಗಿಪೇಟೆ, ಕೈಕಂಬ, ಮೆಲ್ಕಾರ್, ಸಜಿಪ, ವಿಟ್ಲ, ಕಲ್ಲಡ್ಕ ಮತ್ತಿತರ ಕಡೆಗಳಲ್ಲಿ ಕಾರ್ನರ್ ಮೀಟ್, ಪ್ರಚಾರ ಸಭೆ, ಕರಪತ್ರ ವಿತರಣೆ, ಸ್ನೇಹ ಕೂಟ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
