ಬಂಟ್ವಾಳ: ಕ್ರೀಡಾಸ್ಪೂರ್ತಿಯನ್ನು ಬೆಳೆಸುವ ಸಲುವಾಗಿ ಉಚಿತ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು. ಅವರು ಬಿಸಿರೋಡಿನ ತಾ.ಪಂ.ನ ಎಸ್ ಜಿಆರ್ ಎಸ್ ಸಭಾಂಗಣದಲ್ಲಿ ನಡೆದ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು . ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ಶಿಕ್ಷಣ ಇಲಾಖೆಯ ಮೂಲಕ ನೀಡಲು ತಿಳಿಸಿದ್ದೆ .
ಕ್ರೀಡಾಪಟುಗಳಲ್ಲಿ ಸಮಾನತೆ ಮತ್ತು ಶಿಸ್ತನ್ನು ಬೆಳೆಸಲು ಸಮವಸ್ತ್ರ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು. ವೇದಿಕೆಯಲ್ಲಿ ಜಿ.ಪಂ. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಸಾಹುಲ್ ಹಮೀದ್, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ, ತಾ.ಪಂ.ಸದಸ್ಯ ಸಂಜೀವ ಪೂಜಾರಿ , ತಾ.ಪಂ.ಸಿಬ್ಬಂದಿ ಕುಶಾಲಪ್ಪ ಮತ್ತು ಪುರಸಭೆಯ ಮುಖ್ಯಾಧಿಕಾರಿ ರೇಖಾ ಶೆಟ್ಟಿ . ತಾ.ಪಂ.ಕಾರ್ಯನಿರ್ವಣಾಧಿಕಾರಿ ಸಿಪ್ರಿಂಯಾನ್ ಮಿರಾಂದ ಸ್ವಾಗತಿಸಿ , ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ವಂದಿಸಿದರು ನವೀನ್ ಕಾರ್ಯಕ್ರಮ ನಿರೂಪಿಸಿದರು. ಮತ್ತಿತರರು ಉಪಸ್ಥಿತರಿದ್ದರು .

