ಬಂಟ್ವಾಳ :ವಾಮದಪದವು ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ 25ನೇ ವರ್ಷದ ಶ್ರೀ ಶಾರದಾ ಪೂಜೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾಮದಪದವು ಸ. ಪ. ಪೂ. ಕಾಲೇಜು ಸಭಾಂಗಣದಲ್ಲಿ ಸೆ. 28ರಿಂದ ಸೆ. 30 ವರೆಗೆ ಜರಗಲಿದೆ.
ಸೆ. 28 ರಂದು ಬೆಳಗ್ಗೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ, ಕ್ರೀಡಾ ಸ್ಪರ್ಧೆಗಳು, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಭಕ್ತಿ ರಸಮಂಜರಿ, ಸಂಜೆ ಮಹಾಪೂಜೆ ನಡೆಯಲಿದೆ. ಬಳಿಕ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ,ವಾಮದಪದವು ಸ. ಪ್ರ. ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ| ಹರಿಪ್ರಸಾದ್ ಶೆಟ್ಟಿ, ಬಂಟ್ವಾಳ ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿರುವರು. ರಾತ್ರಿ ಬಡಗು ತಿಟ್ಟು ಪೆರ್ಡೂರು ಮೇಳದವರಿಂದ ಚಿತ್ರಾಕ್ಷಿ ಪರಿಣಯ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ.

ಸೆ. 29ರಂದು ಬೆಳಗ್ಗೆ ಸಹಸ್ರನಾಮ ಕುಂಕುಮಾರ್ಚನೆ, ಮಹಾಪೂಜೆ, ಸಂಜೆ ಭಜನೆ, ರಾತ್ರಿ ಮಹಾಪೂಜೆ, ಬಳಿಕ ಧಾರ್ಮಿಕ ಸಭೆಯಲ್ಲಿ ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈಅಧ್ಯಕ್ಷತೆ ವಹಿಸಲಿರುವರು.ಪುತ್ತೂರು ಶಾಸಕಿ ಶಕುಂತಳಾ ಡಿ.ಶೆಟ್ಟಿ , ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿರುವರು. ಬಳಿಕ ಚಾ ಪರ್ಕ ಕಲಾವಿದರಿಂದ ಪನಿಯರೆ ಅವಂದಿನ ತುಳುನಾಟಕ ನಡೆಯಲಿದೆ. ಸೆ.30ರಂದು ಬೆಳಗ್ಗೆ ಭಜನೆ ನಡೆಯಲಿದೆ. ಬಳಿಕ ನಡೆಯಲಿರುವ ಸಮಾರೋಪದಲ್ಲಿ ಕಕ್ಯಪದವು ಕೊಡಿಮಣಿತ್ತಾಯಿ ಬ್ರಹಬೈದರ್ಕಳ ಗರಡಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಅಧ್ಯಕ್ಷತೆ ವಹಿಸಲಿರುವರು.
ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಕಾವಳಕಟ್ಟೆ ಶ್ರುತಿ ದಾಸ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ಮಹಾಪೂಜೆ, ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ

By suddi9

Leave a Reply

Your email address will not be published. Required fields are marked *