ಬಂಟ್ವಾಳ: ಮ0ಗಲಪದವು ಹಾಲು ಉತ್ಪಾದಕರ ಸಹಕಾರಿ ಸ0ಘದ 2016-17ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸ0ಘದ ಅಧ್ಯಕ್ಷರಾದ ಯ0.ರೋಹಿತಾಶ್ವ ಬ0ಗರ ಅವರ ಅಧ್ಯಕ್ಷತೆಯಲ್ಲಿ ಅಯ್ಯಪ್ಪ ಭಜನಾ ಮ0ದಿರದಲ್ಲಿ ನಡೆಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ.ಯ0 2016-17ನೇ ವರದಿ ಮ0ಡಿಸಿದರು.ಅತಿಥಿಗಳಾಗಿ ಆಗಮಿಸಿದ ಜೆ.ಆರ್.ಡಿ.ಸೋಜರವರು ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡಿದರು.ಈ ಸಭೆಯಲ್ಲಿ ಸದಸ್ಯರಿಗೆ ಶೇ 65 ರಷ್ಟು ಬೋನಸ್ಸು, ಶೇ 15 ಡಿವಿಡೆ0ಡ್ ನಿರ್ಣಯಿಸಲಾಯಿತು. ಪ್ರತಿ ಲೀಟರ್ ಹಾಲಿಗೆ 0.88 ಪೈಸೆ ಬೊನಸ್ಸು ವಿತರಣೆ ಮಾಡಲಾಗುವುದು. S.S.L .C. ಹಾಗು P.U.C ಯಲ್ಲಿ ಅತೀ ಹೆಚ್ಚು ಅ0ಕ ಗಳಿಸಿದ ಸ0ಘದ ಹಾಲು ಹಾಕುವ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.
ವಿಸ್ತರಣಾಧಿಕಾರಿ ಪ್ರತಿಭಾ, ನಿರ್ದೇಶಕರಾದ ವಸ0ತ ಬ0ಗೇರ,ಪದ್ಮನಾಭ ರೈ, ಕೃಷ್ಣಪ್ಪ ಗೌಡ, ಸದಸ್ಯರು ಹಾಗು ಸಿಬ್ಬ0ದಿ ವರ್ಗದವರು ಉಪಸ್ಥಿತರಿದ್ದರು. ಸ0ಘದ ಉಪಾಧ್ಯಕ್ಷ ರಮೇಶ್ಚ0ದ್ರ ಸ್ವಾಗತಿಸಿ ನಿರ್ದೇಶಕ ಕೆ.ಶೀನಪ್ಪ ನಾಯ್ಕರವರು ವ0ದಿಸಿದರು.
