ಬಜ್ಪೆ : ತುಳುನಾಡ ಯುಗಪುರುಷರಾದ ಕೋಟಿ ಚೆನ್ನಯ್ಯರವರ ತಾಯಿಯಾದ ದೇಯಿ ಬೈದೆತಿಯ ಪ್ರತಿಮೆಗೆ ಯುವಕನೋರ್ವ ಅಶ್ಲೀಲ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿ ಅಪಮಾನ ಮಾಡಿರುವುದನ್ನು ವಿರೋಧಿಸಿ ಬಂಧಿತ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಗುರುಪುರ ,ಕಂದಾವರ, ಬಜಪೆ , ಅದ್ಯಪಾಡಿ , ಪೆರ್ಮುದೆ,ಕಟೀಲು, ಬಿಲ್ಲವ ಸಂಘಟನೆಗಳ ಒಕ್ಕೂಟ ಹಾಗೂ ಯುವವಾಹಿನಿ ಬಜಪೆ ವತಿಯಿಂದ ಬಜಪೆ ಠಾಣಾ ಪೊಲೀಸರ ಮುಖಾಂತರ ಕಮಿಷನರ್ ಹಾಗೂ ಜಿಲ್ಲಾ ಎಸ್‍ಪಿಗೆ ಮನವಿ ಸಲ್ಲಿಸಲಾಯಿತು. 

ಮನವಿ ಸಲ್ಲಿಸಿದ ನಿಯೋಗದಲ್ಲಿ ಗೆಜ್ಜೆಗಿರಿ ,ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯರಾದ ದೀಪಕ್ ಕೋಟ್ಯಾನ್, ಪೆರ್ಮುದೆ ಬಿಲ್ಲವ ಸಂಘದ ಪ್ರಮುಖರು,ವಿನೋಧರ ಪೂಜಾರಿ, ಕೃಷ್ಣ ಅಮಿನ್,ಅನಿಲ್ ಬಜ್ಪೆ ,ನೀಲಯ್ಯ ಪೂಜಾರಿ,,ಸುಧಾಕರ ಪೂಜಾರಿ, .ಅನಿಲ್ ಸುಂಕದಕಟ್ಟೆ, ಅನೂಜ್ ಸುಂಕದಕಟ್ಟೆ, ಅಶೋಕ್ ಬಜ್ಪೆ, ಶರತ್ ಪೂಜಾರಿ , ಜಯಂತ್ ಪೂಜಾರಿ , ಗಣೇಶ್ ಪೂಜಾರಿ, ಜಯಂತ್ ಪೂಜಾರಿ ,ಗಣೇಶ್ ಪೂಜಾರಿ, ಜಯರಾಮ ಪೂಜಾರಿ, ಸಂದೇಶ್ ಪೂಜಾರಿ, ಲೋಕೇಶ್ ಬಜ್ಪೆ , ಶಿವರಾಜ್ ಬಜ್ಪೆ , ಗೋಪಾಲ್ ದೊಡ್ಡಿಕಟ್ಟ ಹಾಗೂ ಮತ್ತಿತ್ತರರಿದ್ದರು

