ಬಂಟ್ವಾಳ : ಮಂಚಿ ವಲಯ ಮಟ್ಟದ ಪ್ರೌಢ ಶಾಲಾ ವಾಲಿಬಾಲ್ ಪಂದ್ಯಾಟದಲ್ಲಿ ನಾರ್ಶ ಮೈದಾನ ಪ್ರೌಢಶಾಲಾ ಬಾಲಕಿಯರ ತಂಡವು ಪ್ರಥಮ ಸ್ಥಾನ ಹಾಗೂ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಬಾಲಕಿಯರ ವಿಭಾಗದಲ್ಲಿ ಆರೀಫ ಪಂದ್ಯಕೂಟದ ಆಟಗಾರ್ತಿ ಪ್ರಶಸ್ತಿ, ಮಿಶ್ರಿಯ ಉತ್ತಮ ಆಲ್‍ರೌಂಡರ್, ಮುಲೈಲ್ ಉತ್ತಮ ಹೊಡೆತಗಾರ್ತಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ನಾರ್ಶ ಮೈದಾನ ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ರಾವ್ ಹಾಗೂ ಶಾಲಾ ದೈಹಿಕ ಶಿಕ್ಷಕ ಅಬ್ದುಲ್ ರಫೀಕ್ ತಿಳಿಸಿದ್ದಾರೆ.
